ಹುದ್ದೆ ರದ್ದು ಸಂದೇಶಕ್ಕೆ ಅಹಿಂದ ಮುಖಂಡರ ಆಕ್ರೋಶ

ODEYAR 2
Published on

ಚಿತ್ರದುರ್ಗ: ಜಿಲ್ಲಾ ಕಾಂಗ್ರೆಸ್ ಕಾರ‌್ಯಾಧ್ಯಕ್ಷ ಸಿ.ಶಿವುಯಾದವ್ ಹುದ್ದೆ ರದ್ದುಪಡಿಸಲಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಸಂದೇಶಕ್ಕೆ ಅಹಿಂದ ಬಳಗದ ಮುಖಂಡ ಮುರುಘರಾಜೇಂದ್ರ ಒಡೆಯರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹಾಜಿ ಷಫಿವುಲ್ಲಾ ಹೆಸರಲ್ಲಿರುವ ಈ ಪತ್ರದಲ್ಲಿ ಶಿವುಯಾದವ್ ಹುದ್ದೆ ರದ್ದಾಗಿದೆ ಎಂದು ತಿಳಿಸಲಾಗಿದೆ.

ಕೆಪಿಸಿಸಿ ಅಧ್ಯಕ್ಷರನ್ನು ಹೊರತುಪಡಿಸಿ ಬೇರೆ ಯಾರಿಗೂ ಆದೇಶ ಹೊರಡಿಸುವ ಅಧಿಕಾರವಿಲ್ಲ. ಪಕ್ಷದ ಜಿಲ್ಲಾ ಮತ್ತು ರಾಜ್ಯಪ್ರಮುಖರು ಮಧ್ಯಪ್ರವೇಶಿಸಿ ಗೊಂದಲ ನಿವಾರಿಸಬೇಕೆಂದು ಆಗ್ರಹಿಸಿದರು.

ಮುಖಂಡ ಟಿ.ಶಫಿವುಲ್ಲಾ ಮಾತನಾಡಿ, ಸಂದೇಶ ಹರಿಬಿಟ್ಟಿರುವವರು ಯಾರೆಂದು ಪತ್ತೆ ಹಚ್ಚಿ ಅವರನ್ನು ಪಕ್ಷದಿಂದ ಉಚ್ಚಾಟಿಸ ಬೇಕೆದು ಒತ್ತಾಯಿಸಿದರು.

ಅಹಿಂದ ಸಂಘಟನೆ ಮುಖಂಡರಾದ ನರಸಿಂಹಮೂರ್ತಿ, ದೇವರಾಜ್, ನಾಗೇಂದ್ರಪ್ಪ, ಲಿಂಗಣ್ಣ, ಅವಿನಾಶ್, ಲೋಕೇಶ್ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net