

ಚಿತ್ರದುರ್ಗ: ಜಿಲ್ಲೆಯ ಚಳ್ಳಕೆರೆ,ಹೊಸದುರ್ಗ ಹಾಗೂ ಚಿತ್ರದುರ್ಗದ ಸಾಂಸ್ಥಿಕ ಹೋಂ ಕ್ವಾರಂಟೈನ್‌ನಲ್ಲಿದ್ದವರ ಪ್ರಯೋಗಾಲಯ ಪರೀಕ್ಷೆ ವರದಿ ನೆಗೆಟಿವ್ ಬಂದಿದೆ ಎಂದು ಜಿಲ್ಲಾಧಿಕಾರಿ ಆರ್.ವಿನೋತ್ ಪ್ರಿಯಾ ತಿಳಿಸಿದ್ದಾರೆ.
ಇವರನ್ನು ಶುಕ್ರವಾರ ಮನೆಗೆ ಕಳುಹಿಸಲಾಗುವುದು. ಅವರು ಇನ್ನು 14 ದಿನಗಳ ಕಾಲ ಹೋಂ ಕ್ವಾರಂ ಟೈನ್‌ನಲ್ಲಿ ಇರಬೇಕಾಗುತ್ತದೆ. ಗುರುವಾರ 7 ಜನರ ಗಂಟಲು ದ್ರವ ಮಾದರಿ ಸಂಗ್ರಹಿಸಲಾಗಿದೆ ಎಂದು ಡಿಎಚ್‌ಒ ಡಾ. ಸಿ.ಎಲ್.ಪಾಲಾಕ್ಷ ತಿಳಿಸಿದ್ದಾರೆ.
ಹೋಂ ಕ್ವಾರಂಟೈನಲ್ಲಿರುವ ಯಾರೇ ಆಗಲಿ ಖಿನ್ನತೆ ಒಳಗಾಗದಂತೆ ಐವರು ಮಾನಸಿಕ ತಜ್ಞ ವೈದ್ಯರ ತಂಡ ಕೆಲಸ ಮಾಡುತ್ತಿರುವುದಾಗಿ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ತುಳಸಿ ರಂಗನಾಥ್ ತಿಳಿಸಿದ್ದಾರೆ.
12 ಫೀವರ್ ಕ್ಲಿನಿಕ್‌ಗಳಲ್ಲಿ ಗುರುವಾರ 177 ಜನರು ತಪಾಸಣೆ ಮಾಡಿಸಿಕೊಂಡಿದ್ದಾರೆ. ಈವರೆಗೆ ಒಟ್ಟು 1595 ಜನರು ತಪಾಸಣೆಗೊಳಗಾಗಿದ್ದಾರೆ ಎಂದು ನೋಡಲ್ ಅಧಿಕಾರಿ ಜಿ.ಸವಿತಾ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಅವಲೋಕನೆಗಾಗಿ ನೋಂದಣಿ ಆದವರ ಸಂಖ್ಯೆ-315
28 ದಿನಗಳ ಅವಲೋಕನ ಪೂರ್ಣ-114
14 ದಿನಗಳ ಅವಲೋಕನ ಪೂರ್ಣ-265
ಮನೆಯಲ್ಲಿ ನಿಗಾವಣೆ-26
ಸಾಂಸ್ಥಿಕ ನಿಗಾವಣೆ-95
ಆಸ್ಪತ್ರೆ ನಿಗಾವಣೆ -2
ಪರೀಕ್ಷೆಗೆ ಸಂಗ್ರಹಿಸಿದ್ದ ಮಾದರಿ -188
ನೆಗೆಟಿವ್ ವರದಿಗಳು-167