

ಚಿತ್ರದುರ್ಗ: ಬಿಜೆಪಿ ಜಿಲ್ಲಾ ಘಟಕದಿಂದ ಚಿತ್ರದುರ್ಗ ದೊಡ್ಡಪೇಟೆ ಸವಿತಾ ಸಮಾಜದ ಬಡ ಕುಟುಂಬಗಳು ಹಾಗೂ ಕರುವಿನಕಟ್ಟೆ ವೃತ್ತ ತಿಪ್ಪಿನಘಟ್ಟಮ್ಮ ದೇವಾಲಯ ಆಸುಪಾಸಿನಲ್ಲಿರುವ ಬಡವರಿಗೆ ಬುಧವಾರ ಆಹಾರ ಧಾನ್ಯ ವಿತರಿಸಲಾಯಿತು.
ಪಕ್ಷದ ಜಿಲ್ಲಾಧ್ಯಕ್ಷ ಎ.ಮುರಳಿ, ವಿಭಾಗೀಯ ಪ್ರಭಾರಿ ಜಿ.ಎಂ.ಸುರೇಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ್ ಸಿದ್ದಾಪುರ, ಶಿವಣ್ಣಾಚಾರ್,ನಾಗರಾಜ್‌ಬೇದ್ರೆ, ದಗ್ಗೆ ಶಿವಪ್ರಕಾಶ್, ವೆಂಕಟೇಶ್‌ಯಾದವ್, ಸವಿತಾ ಸಮಾಜದ ಮುಖಂಡರಾದ ಲಿಂಗರಾಜ್, ನರಸಿಂಹಮೂರ್ತಿ ಹಾಗೂ ಶ್ಯಾಂ ಇದ್ದರು.