ಚಿತ್ರದುರ್ಗದಲ್ಲಿಂದು ‘ಸಂವಾದ ಸಂಗೀತ’

ss
Published on

ಚಿತ್ರದುರ್ಗ: ನಗರದ ಐಶ್ವರ್ಯಾ ಫೋರ್ಟ್‌ನಲ್ಲಿ ಮೇ 14ರ ಸಂಜೆ 5.30ಕ್ಕೆ ‘ನಾವೆಲ್ಲರೂ ಒಂದೇ’ ತಂಡದಿಂದ ಸಂವಾದ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದೆ.

ಕೆಜಿಎಫ್‌ನ ಭಗವಾನ್ ಮಹಾವೀರ ಜೈನ್ ಕಾಲೇಜಿನ ಹಿರಿಯ ಕನ್ನಡ ಉಪನ್ಯಾಸಕ ಡಾ.ಡಿ.ಎಸ್.ಶ್ರೀನಿವಾಸ್ ಪ್ರಸಾದ್, ಖ್ಯಾತ ನಿರೂಪಕ ಸಾರ್ಥವಳ್ಳಿ ನಾರಾಯಣಸ್ವಾಮಿ ಸಂವಾದದಲ್ಲಿ ಪಾಲ್ಗೊಳ್ಳುವರು.

ಡಾ.ಡಿ.ಎಸ್.ಶ್ರೀನಿವಾಸ್ ಪ್ರಸಾದ್ ಅವರ 95 ಸಿನಿ ಕಲಾವಿದರ ಕುರಿತಾದ ಲೇಖನಗಳ ಕೃತಿ ಸಿನಿ ಬಿಂಬ ಹಾಗೂ ಸಂಗೀತದ ರಾಗಾಧಾರಿತ ಗೀತೆಗಳ ಕುರಿತಾದ ಕೃತಿ ಸ್ವರ ರಾಗ ಸುಧಾ ಪುಸ್ತಕ ಬಿಡುಗಡೆಯಾಗಲಿದ್ದು, ಅಂಜನಾ ನೃತ್ಯ ಕಲಾ ಕೇಂದ್ರದ ಪ್ರಾಚಾರ್ಯ ವಿದ್ವಾನ್ ಸಿ.ಆರ್.ಶಿವಪ್ರಕಾಶ್, ನೃತ್ಯ ಕಲಾವಿದೆ ಡಾ.ನಂದಿನಿ ಶಿವಪ್ರಕಾಶ್ ಅವರನ್ನು ಸನ್ಮಾನಿಸಲಾಗುವುದು.

ಕಲಾವಿದರಾದ ಬೆಂಗಳೂರಿನ ಜ್ಯೋತಿ ರವಿಪ್ರಕಾಶ್, ಶ್ರೀನಿವಾಸಮೂರ್ತಿ ಎಚ್.ಎಸ್.ಶ್ರೀನಿವಾಸ್ ಭಾರದ್ವಾಜ್, ಅಂಜಲಿ ಹಳಿಯಾಳ್, ವಿಜಯಾನಂದ್, ಲಕ್ಷ್ಮಿ ಶ್ರೇಯಾಂಸಿ, ಬಸವರಾಜೇಶ್ವರಿ ಅವರು ಸಂಗೀತ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net