1203 ಉಪನ್ಯಾಸಕರಿಗೆ ಶೀಘ್ರ ನೇಮಕಾತಿ ಆದೇಶ

SURESHKUKMAR download
Published on

ಚಿತ್ರದುರ್ಗ: 2015ರಲ್ಲಿ ಆರಂಭವಾಗಿದ್ದ ಪದವಿ ಪೂರ್ವ ಉಪನ್ಯಾಸಕರ ನೇಮಕ ಪ್ರಕ್ರಿಯೆ ಪೂರ್ಣಗೊಂಡಿದ್ದು, ಶೀಘ್ರದಲ್ಲೇ ನೇಮಕ ಪತ್ರ ವಿತರಿಸುವುದಾಗಿ ಶಿಕ್ಷಣ ಸಚಿವ ಎಸ್.ಸುರೇಶ್‌ಕುಮಾರ್ ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 1203 ಉಪನ್ಯಾಸಕರ ಆಯ್ಕೆ ಪ್ರಕ್ರಿಯೆ ಪೂರ್ಣಗೊಂಡಿದೆ. ಸೆಂಕೆಂಡ್ ಪಿಯಸಿ ಇಂಗ್ಲಿಷ್ ವಿಷಯದ ಪರೀಕ್ಷೆ ಪೂರ್ಣವಾದ ಬಳಿಕ, ಆಯ್ಕೆಯಾದವರಿಗೆ ಕೌನ್ಸಿಲಿಂಗ್ ನಡೆಸಿ ಆದೇಶ ಪತ್ರ ವಿತರಿಸುವುದಾಗಿ ಹೇಳಿದರು.

ಕನಸು ಕಾಣಲಿ: ಬಿಜೆಪಿ ಸರ್ಕಾರ ತನ್ನ ಭ್ರಷ್ಟತೆಯಿಂದಾಗಿ ಬಿದ್ದು ಹೋಗಲಿದೆ ಎಂಬ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಅವರು ಕನಸು ಕಾಣಲಿ ಎಂದಷ್ಟೇ ಪ್ರತಿಕ್ರಿಯೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net