ಮಕ್ಕಳಿಗೆ ಕಲಿಸಬೇಕು ಸಂಸ್ಕಾರ

CTD BAPUJI 26
Published on

ಚಿತ್ರದುರ್ಗ: ಬುದ್ಧ, ಬಸವ, ಗಾಂಧಿ, ಅಂಬೇಡ್ಕರ್ ಮೊದಲಾದ ಮಹನೀಯರ ಆದರ್ಶಗಳನ್ನು ಮಕ್ಕಳಿಗೆ ಪಾಲಕರು, ಶಿಕ್ಷಕರು ಹೇಳಿಕೊಡುವ ಮೂಲಕ ಸಂಸ್ಕಾರವಂತರನ್ನಾಗಿ ಮಾಡಬೇಕು ಎಂದು ಡಿಡಿಪಿಐ ಕೆ.ರವಿಶಂಕರ್ ರೆಡ್ಡಿ ಸಲಹೆ ನೀಡಿದರು.

ನಗರದ ಬಾಪೂಜಿ ವಿದ್ಯಾಸಂಸ್ಥೆ ಆವರಣದಲ್ಲಿ ಮಂಗಳವಾರ ರಾತ್ರಿ ಆಯೋಜಿಸಿದ್ದ ಮಕ್ಕಳ ಹಬ್ಬ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮಹಾಪುರುಷರ ಆದರ್ಶಗಳನ್ನು ಮಕ್ಕಳಿಗೆ ತಿಳಿಸಬೇಕು. ಅವರ ಜೀವನ ಸರ್ವಕಾಲಕ್ಕೂ ಅನ್ವಯವಾಗುತ್ತವೆ. ಭಾರತದ ಮಕ್ಕಳು ತುಂಬಾ ಬುದ್ಧಿವಂತರು, ಇತರೆ ದೇಶಗಳಿಗೆ ಸ್ಪರ್ಧೆವೊಡ್ಡುವ ಸಾಮರ್ಥ್ಯ ಇದೆ ಎಂದರು.

ತಮಿಳುನಾಡು ಯೂನಿವರ್ಸಲ್ ವಿವಿಯಿಂದ ಗೌರವ ಡಾಕ್ಟರೇಟ್ ಪಡೆದಿರುವ ಗದಗ ಜಿಲ್ಲೆ ನರಗುಂದ 2ನೇ ತರಗತಿ ವಿದ್ಯಾರ್ಥಿನಿ ವೈದೃತಿನಾಗ್ ಕೋರಿ ಶೆಟ್ಟರ್, ಕನ್ನಡ ವಿವಿ ಪಿಎಚ್‌ಡಿ ಪದವಿ ಪಡೆದ ಡಾ.ರಾಣಿ ಬಾಲಕೃಷ್ಣ, ಡಾ.ಬಾಬು ಕಾಮಟೆ, ಹರಿಹರ ಗ್ರಾಮಾಂತರ ಠಾಣೆ ಪಿಎಸ್‌ಐ ರವಿಕುಮಾರ ಅವರನ್ನು ಸನ್ಮಾನಿಸಲಾಯಿತು.

2018-19ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಿದ ಕೆ.ವಿ.ಸ್ನೇಹಾ, ಭೂಮಿಕಾ ಹಾಗೂ ಚೈತ್ರಶಾಸ್ತ್ರಿ ಅವರನ್ನು ಗೌರವಿಸಲಾಯಿತು.

ಬಾಪೂಜಿ ಸಮೂಹ ಸಂಸ್ಥೆಗಳ ಕಾರ್ಯದರ್ಶಿ ಕೆ.ಎಂ.ವೀರೇಶ್, ಸಂಸ್ಥೆ ನಿರ್ದೇಶಕ ಕೆ.ಎಂ.ಚೇತನ್, ಕ್ಷೇತ್ರ ಸಮನ್ವಯ ಅಧಿಕಾರಿ ಟಿ.ಈಶ್ವರಪ್ಪ, ಕಲಾವಿದ ಪ್ರೊ.ಕೆ.ಜಂಬುನಾಥ್, ನಗರಸಭೆ ಮಾಜಿ ಅಧ್ಯಕ್ಷೆ ಸುನಿತಾ ಮಲ್ಲಿಕಾರ್ಜುನ, ಬಾಪೂಜಿ ಸಮೂಹ ಸಂಸ್ಥೆಗಳ ಶೈಕ್ಷಣಿಕ ಸಂಯೋಜಕ ಎಚ್.ಎನ್.ಶಿವಕುಮಾರ್, ಲಸ್ಟ್ರರ್ಸ್‌ ಗೂಪ್‌ನ ಎಡ್ರಿನ್ ಪಾಷಾ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net