

ಚಿತ್ರದುರ್ಗ: ಜಿಲ್ಲೆ ಸಮಾಚಾರ ದಿನ ಪತ್ರಿಕೆ ಬಳಗ, ಸಾಹಿತಿ ಬಿ.ಎಲ್.ವೇಣು ಅವರಿಗೆ 2019ರ ವರ್ಷದ ವ್ಯಕ್ತಿ ಸಾಧಕ ಪ್ರಶಸ್ತಿ ಪ್ರದಾನ, ವೇಣುಗೆ 75ನೇ ವರ್ಷದ ಸಂಭ್ರಮಾಭಿಷೇಕ ಸಮಾರಂಭವನ್ನು ದಾವಣಗೆರೆಯ ಸಿದ್ಧಗಂಗಾ ವಿದ್ಯಾಸಂಸ್ಥೆ ಆವರಣದಲ್ಲಿ ಫೆ.25ರ ಸಂಜೆ 6ಕ್ಕೆ ಆಯೋಜಿಸಿದೆ.
ದಾವಣಗೆರೆ ವಿವಿ ಕುಲಪತಿ ಡಾ.ಶರಣಪ್ಪ ವಿ.ಹಲಸೆ ಸಮಾರಂಭ ಉದ್ಘಾಟಿಸಲಿದ್ದಾರೆ. ಜಗಳೂರು ಶಾಸಕ ಎಸ್.ವಿ.ರಾಮಚಂದ್ರ ಅಧ್ಯಕ್ಷತೆ ವಹಿಸಲಿದ್ದಾರೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಟಿ.ಎಸ್.ನಾಗಭರಣ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
ವೇಣು ಸಾಹಿತ್ಯ ಕೃಷಿ ಹೆಜ್ಜೆ ಗುರುತುಗಳ ಕುರಿತು ವಿಮರ್ಶಕ ಡಾ.ಲೋಕೇಶ ಅಗಸನಕಟ್ಟೆ, ವೇಣು ಸಿನಿಮಾ ಸಾಹಿತ್ಯ ಕುರಿತು ಸಿನಿಮಾ ಪತ್ರಕರ್ತ ಗಣೇಶ ಕಾಸರಗೋಡು, ಕಲ್ಲರಳಿ ಹೂವಾಗಿ ಕೃತಿ ಕುರಿತು ವಿದ್ಯಾಸಂಸ್ಥೆ ಸಂಸ್ಥಾಪಕ ಡಾ.ಜಸ್ಟಿನ್ ಡಿ.ಸೌಜ ಮಾತನಾಡಲಿದ್ದಾರೆ.
ಎನ್.ಟಿ.ಎರ‌್ರಿಸ್ವಾಮಿ, ಡಾ.ಈಶ್ವರ ಶರ್ಮ, ವಿ.ಹನುಮಂತಪ್ಪ ಇತರರು ಪಾಲ್ಗೊಳ್ಳಲಿದ್ದಾರೆ. ವೇಣು ಕುರಿತು ಸಾಕ್ಷೃಚಿತ್ರದ ಪ್ರದರ್ಶನ ಹಾಗೂ ಸಮಾರಂಭದ ಅಂಗವಾಗಿ ಆಯೋಜಿಸಿದ್ದ ವಿವಿಧ ಸ್ಪರ್ಧಾತ ವಿಜೇತರಿಗೆ ಬಹುಮಾನ ವಿತರಿಸಲಾಗುವುದು ಎಂದು ಬಳಗ ತಿಳಿಸಿದೆ.