‘ಮಗಳು ಜಾನಕಿ’ ಮದುವೆ

CTD 16 MADUVE
Published on

ಚಿತ್ರದುರ್ಗ: ‘ಮಗಳು ಜಾನಕಿ’ ಧಾರಾವಾಹಿ ಸಂಜನಾ ಪಾತ್ರ ಖ್ಯಾತಿಯ ಕಿರುತೆರೆ ನಟಿ ಸುಪ್ರಿಯಾ ಹಾಗೂ ಸಾಫ್ಟ್‌ವೇರ್ ಇಂಜಿನಿಯರ್ ವಿಜಯ್ ವಿವಾಹ ಗುರುವಾರ ತಾಲೂಕಿನ ಜಾನುಕೊಂಡ ಗ್ರಾಮ ಸಮೀಪದ ಶ್ರೀಲಕ್ಷ್ಮೀರಂಗನಾಥ ಸ್ವಾಮಿ ದೇವಾಲಯದಲ್ಲಿ ಸರಳವಾಗಿ ನಡೆಯಿತು.

ಕರೊನಾ ಲಾಕ್‌ಡೌನ್ ಕಾರಣಕ್ಕೆ ವಧು, ವರ ಹಾಗೂ ಅವರ ಕುಟುಂಬದವರು ಸಹಿತ 20 ಮಂದಿ ಈ ಶುಭ ಸಂದರ್ಭವನ್ನು ಸಾಕ್ಷೀಕರಿಸಿದರು.

ದೇವಾಲಯದ ಪುರೋಹಿತರ ಸಾನ್ನಿಧ್ಯದಲ್ಲಿ ಅರ್ಧ ತಾಸಿನೊಳಗೆ ವಿವಾಹಕ್ಕೆ ಸಂಬಂಧಿಸಿದ ಶಾಸ್ತ್ರ, ಸಂಪ್ರದಾಯಗಳು ನೆರವೇರಿದವು. ಲಕ್ಷಾಂತರ ರೂ. ವೆಚ್ಚದಲ್ಲಿ ಅದ್ಧೂರಿಯಿಂದ ಜರುಗ ಬೇಕಿದ್ದ ಮದುವೆ, ಹತ್ತಾರು ಸಾವಿರ ರೂ. ಗಳಿಗೆ ಸೀಮಿತಗೊಂಡಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net