

ಚಿತ್ರದುರ್ಗ: ಭಾನುವಾರ ರಾತ್ರಿ ಜಿಲ್ಲೆಯ ವಿವಿಧೆಡೆ ಬಿರುಗಾಳಿ ಸಹಿತ ಮಳೆಗೆ ಅಪಾರ ಬೆಳೆ, ಆಸ್ತಿ ಹಾನಿಯಾಗಿದ್ದು, ಜೀವಹಾನಿ ಸಂಭವಿಸಿಲ್ಲ.
ವಿದ್ಯುತ್ ಕಂಬ, ಮರಗಳು ಧರೆಗುರುಳಿದರೆ, ಕೆಲವೆಡೆ ಮನೆಗಳ ಚಾವಣಿ ಗಾಳಿಗೆ ಹಾರಿ ಹೋಗಿದ್ದು, ಜನಜೀವನ ಸಂಕಷ್ಟಕ್ಕೆ ಸಿಲುಕಿತ್ತು. ವಿದ್ಯುತ್ ಕಂಬಗಳಿಗೆ ಹಾನಿಯಾಗಿದ್ದರಿಂದ ಕೆಲ ಗ್ರಾಮಗಳು ಕತ್ತಲಲ್ಲಿ ಮುಳುಗಿದ್ದವು.
ಶನಿವಾರ ರಾತ್ರಿ ವರದಿಯಂತೆ ಜಿಲ್ಲೆಯಲ್ಲಿ ಸುರಿದ ಮಳೆಗೆ ಹೊಸದುರ್ಗ ತಾಲೂಕು ಮತ್ತೋಡು ಗ್ರಾಮದಲ್ಲಿ 40 ಮಿ.ಮೀ ಹೆಚ್ಚು ಮಳೆಯಾಗಿದೆ.
ಚಿತ್ರದುರ್ಗ 1ರಲ್ಲಿ 2.6, ಚಿತ್ರದುರ್ಗ 2-3.7, ಹಿರೇಗುಂಟನೂರು-1, ಭರಮಸಾಗರ-18.4, ಸಿರಿಗೆರೆ-13.4, ಐನಹಳ್ಳಿ-1.2, ಹೊಸದುರ್ಗ-9, ಬಾಗೂರು-5, ಶ್ರೀರಾಂಪುರ-25, ಮಾಡದಕೆರೆ 21, ಹಿರಿಯೂರು-37, ಬಬ್ಬೂರು-26.4, ಸುಗೂರು-7.3, ಇಕ್ಕನೂರು-25.4, ಈಶ್ವರಗೆರೆ 21, ಜೆ.ಜಿ.ಹಳ್ಳಿ-2.5, ಹೊಳಲ್ಕೆರೆ-11, ರಾಮಗಿರಿ-11, ಚಿಕ್ಕಜಾಜೂರು 10.2, ಬಿ.ದುರ್ಗ-12.2, ಎಚ್.ಡಿ.ಪುರ 2, ತಾಳ್ಯ 2, ಚಳ್ಳಕೆರೆ-3.2, ಪರಶುರಾಂಪುರ-14, ಡಿ.ಮರಿಕುಂಟೆ 22.4, ತಳಕು-9.2, ನಾಯಕನಹಟ್ಟಿ-1.4, ಮೊಳಕಾಲ್ಮೂರು ತಾಲೂಕು ರಾಯಾಪುರ-2.2,ಬಿ.ಜಿ.ಕೆರೆ-28.4, ರಾಂಪುರ-2.2, ದೇವಸಮುದ್ರ 7.2 ಮಿ.ಮೀ ಮಳೆಯಾಗಿದೆ.