10 ಜೂಜುಕೋರರ ಬಂಧನ

CRIME download
Published on

ಚಿತ್ರದುರ್ಗ: ಹಿರಿಯೂರು ಹಾಗೂ ಚಿತ್ರದುರ್ಗದಲ್ಲಿ ಶುಕ್ರವಾರ ಡಿಸಿಐಬಿ ಹಾಗೂ ದಾವಣಗೆರೆ ಪೂರ್ವವಲಯ ಐಜಿಪಿ ಕಚೇರಿಯ ಅಪರಾಧ ವಿಭಾಗದ ಪೊಲೀಸರು ಶುಕ್ರವಾರ ಪ್ರತ್ಯೇಕ ದಾಳಿ ನಡೆಸಿ, 14 ಜೂಜುಕೋರರನ್ನು ಬಂಧಿಸಿ, 2.32 ಲಕ್ಷ ರೂ., ಮೊಬೈಲ್ ಪೋನ್ ಹಾಗೂ ಬೈಕ್‌ಗಳನ್ನು ವಶಕ್ಕೆ ಪಡೆದಿದ್ದಾರೆ.

ಹಿರಿಯೂರು ತಾಲೂಕು ಸೂರಗೊಂಡನಹಳ್ಳಿ ಸಮೀಪದ ಜಮೀನಲ್ಲಿ ಡಿಸಿಐಬಿ ಪೊಲೀಸರು ನಾಲ್ವರನ್ನು ಬಂಧಿಸಿ, 1.85 ಲಕ್ಷ ರೂ. ವಶಪಡಿಸಿಕೊಂಡಿದ್ದಾರೆ. ಹಿರಿಯೂರು ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಚಿತ್ರದುರ್ಗ ಹೊರವಲಯದಲ್ಲಿ 10 ಜನರನ್ನು ಐಜಿಪಿ ಕಚೇರಿಯ ಪೊಲೀಸರು ಬಂಧಿಸಿ, 47,540 ರೂ., 13 ಮೊಬೈಲ್‌ಪೋನ್ ಹಾಗೂ 6 ಬೈಕ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಚಿತ್ರದುರ್ಗ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net