

ಚಿತ್ರದುರ್ಗ: ಕರೊನ ಸೋಂಕು ನಿಯಂತ್ರಣ ನಿಟ್ಟಿನಲ್ಲಿ ಲಾಕ್‌ಡೌನ್ ಘೋಷಣೆ ಆಗಿದ್ದು, ಇಂತಹ ಸನ್ನಿವೇಶದಲ್ಲಿ ಸಾರ್ವಜನಿಕರಿಗೆ ತೊಂದರೆಯಾ ಗದಂತೆ ದಿನಸಿ ಸಹಿತ ಅಗತ್ಯ ನಿತ್ಯ ವಸ್ತುಗಳ ಲಭ್ಯತೆ,ಕುಡಿವ ನೀರು ಹಾಗೂ ಸ್ವಚ್ಛತೆ ಸಮಸ್ಯೆಗಳ ನಿವಾರಣೆ ಹೊಣೆಯನ್ನು ನಗರಸಭೆ ತನ್ನ ಸದಸ್ಯರು, ಅಧಿಕಾರಿಗಳಿಗೆ ವಹಿಸಿದೆ.
ಈ ನಿಟ್ಟಿನಲ್ಲಿ ನಾಗರಿಕರು ತಮ್ಮ ವಾರ್ಡಿನ ಸದಸ್ಯರು,ಇತರೆ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಅಧಿಕಾರಿಗಳನ್ನು ಸಂಪರ್ಕಿಸಬಹುದು ಹಾಗೂ 24 ಗಂಟೆ ಕೆಲಸ ನಿರ್ವಹಿಸುವ ಸಹಾಯವಾಣಿ(08194-222401) ಸ್ಥಾಪಿಸಲಾಗಿದೆ ಎಂದು ನಗರಸಭೆ ಆಯುಕ್ತ ಜಿ.ಟಿ. ಹನುಮಂತರಾಜು ತಿಳಿಸಿದ್ದಾರೆ.
ಕುಡಿವ ನೀರು ಪೂರೈಕೆ: ಎಇಇ ಮನೋಹರ್ (9741539676), ಜೆಇ ಎಸ್.ಆರ್.ಕಿರಣ್‌ಕುಮಾರ್ (9886787899), ಸ್ವಚ್ಚತೆ-ಪರಿಸರ ಇಂಜಿನಿಯರ್ ಜಾಫರ್‌ಸಾಬ್ (9620804061), ಹಿರಿಯ ಆರೋಗ್ಯ ನಿರೀಕ್ಷಕರಾದ ಎ.ಬಾಬುರೆಡ್ಡಿ (7259341919), ಸಿ.ಸರಳಾ (9901124232)ರುಕ್ಮಿಣಿ (8310684884), ಕೆ.ಎಸ್.ಭಾರತಿ(8105311730), ಕಿರಿಯ ಆರೋಗ್ಯ ನಿರೀಕ್ಷಕರಾದ ನಾಗರಾಜ (8496088111), ಬಸವರಾಜ(9740642719) ಅವರನ್ನು ಹಾಗೂ ಆಯಾ ವಾರ್ಡ್‌ಗಳ ನಗರಸಭೆ ಸದಸ್ಯರನ್ನು ಸಂಪರ್ಕಿಸಬಹುದು ಎಂದು ಆಯುಕ್ತ ಹನುಮಂತರಾಜು ತಿಳಿಸಿದ್ದಾರೆ.