ಆಕ್ಸಿಜನ್, ವೆಂಟಿಲೇಟರ್ ಒದಗಿಸಿ

CTD 23 dc mla
Published on

ಚಿತ್ರದುರ್ಗ: ಕರೊನಾ ಸೋಂಕಿನಿಂದ ಎಂಥದ್ದೇ ಕಠಿಣ ಪರಿಸ್ಥಿತಿ ಎದುರಾದರೂ ಅದನ್ನು ಎದುರಿಸಲು ಜಿಲ್ಲಾಡಳಿತ ಸಜ್ಜಾಗಬೇಕು ಎಂದು ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಜಿಲ್ಲಾಧಿಕಾರಿಗೆ ಸೂಚಿಸಿದರು.

ಅಗತ್ಯ ವೈದ್ಯಕೀಯ ಸಲಕರಣೆಗಳನ್ನು ಸಜ್ಜುಗೊಳಿಸಿಕೊಳ್ಳುವಂತೆ ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧಿಕಾರಿಗೆ ಪತ್ರ ಹಸ್ತಾಂತರಿಸಿದ ಮಾತನಾಡಿ, ದೇವರ ದಯೆಯಿಂದ ಇಟಲಿಯಂಥ ಪರಿಸ್ಥಿತಿ ಬರದಿರಲಿ ಎಂದು ಆಶಯ ವ್ಯಕ್ತಪಡಿಸಿದರು.

ಮೂರನೇ ಹಂತಕ್ಕೆ ಹೋದರೆ ಜಿಲ್ಲೆಯ ಪರಿಸ್ಥಿತಿ ಊಹಿಸಲಾಗದು. ಆದ್ದರಿಂದ ವೆಂಟಿಲೇಟರ್ಸ್‌, ತರಬೇತಿ ಪಡೆದ ಸಿಬ್ಬಂದಿ, ಆಕ್ಸಿಜನ್ ಸಹಿತ ಜಿಲ್ಲಾಸ್ಪತ್ರೆಯಲ್ಲಿ ಸುಸಜ್ಜಿತ ಐಸಿಯು ಮತ್ತು ಐಸೋಲೇಶನ್ ವಾರ್ಡ್‌ಗಳ ಸ್ಥಾಪಿಸುವಂತೆ ಸೂಚಿಸಿದರು.

ನಾಗರಿಕರು ಉದಾಸೀನ ಮಾಡದೆ ಸರ್ಕಾರಗಳ ಸೂಚನೆಗಳನ್ನು ತಪ್ಪದೆ ಪಾಲಿಸಬೇಕು. ವೈದ್ಯರು, ವೈದ್ಯಕೀಯ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರು ದೇವರೆಂದು ಅವರ ಕರ್ತವ್ಯ ಪ್ರಜ್ಞೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net