

ಚಿತ್ರದುರ್ಗ: ಕರೊನಾ ಸೋಂಕು ಶಂಕೆ ಹಿನ್ನೆಲೆಯಲ್ಲಿ ಜಿಲ್ಲೆಯಿಂದ 16 ಜನರ ಗಂಟಲು ದ್ರವವನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಈ ಪೈಕಿ ಆರು ಜನರಲ್ಲಿ ನೆಗಿಟಿವ್ ಕಂಡು ಬಂದಿದೆ.
ಉಳಿದವರ ವರದಿ ಬರಬೇಕಿದೆ. ಇವರೆಲ್ಲರು ವಿದೇಶದಿಂದ ಆಗಮಿಸಿದರು. ಇಲ್ಲಿಯವರೆಗೂ ಜಿಲ್ಲೆಯಲ್ಲಿ ಯಾವುದೇ ಪ್ರಕರಣಗಳು ವರದಿ ಆಗಿಲ್ಲ. ಜತೆಗೆ ಸಹಾಯವಾಣಿ ಸ್ಥಾಪಿಸಲಿದ್ದಾಗಿದ್ದು 104 ಅಥವಾ 1077ಗೆ ಸಂಪರ್ಕಿಸಬಹುದಾಗಿದೆ ಎಂದು ಡಿಎಚ್ ಸಿ.ಎಲ್.ಪಾಲಾಕ್ಷ ತಿಳಿಸಿದ್ದಾರೆ.