ಸೋಂಕು ಹರಡುವಿಕೆ ತಡೆಗೆ ಮುನ್ನೇಚ್ಚರಿಕೆ ಅಗತ್ಯ

ctd 20 sp muruga
Published on

ಚಿತ್ರದುರ್ಗ: ಕರೊನ ಸೋಂಕು ಹರಡುತ್ತಿರುವ ಈ ಸಮಯದಲ್ಲಿ ಮನುಷ್ಯನ ಪ್ರಾಣವನ್ನು ಮಾನವನೇ ಉಳಿಸಬೇಕಾಗಿರುವ ತುರ್ತು ಸನ್ನಿವೇಶ ಎದುರಾಗಿದೆ ಎಂದು ಶ್ರೀ ಶಿವಮೂರ್ತಿ ಮುರುಘಾ ಶರಣರು ಹೇಳಿದರು.

ಮುರುಘಾ ಮಠದಲ್ಲಿ ಮಠದಲ್ಲಿ ಪೊಲೀಸ್ ಇಲಾಖೆಯವರಿಗೆ ಸ್ಯಾನಿಟೈಸರ್ ಸ್ಪ್ರೇಯರ್ ವಿತರಿಸಿ ಮಾತನಾಡಿ, ಕರೊನಾ ಸೋಂಕಿನ ವಿರುದ್ಧ ಆರೋಗ್ಯ, ಪೊಲೀಸ್ ಮತ್ತಿತರ ಇಲಾಖೆ ಸಿಬ್ಬಂದಿ ಪ್ರಾಣದ ಹಂಗು ತೊರೆದು ಹೋರಾಡುತ್ತಿದ್ದು, ಅವರೆಲ್ಲರ ಆರೋಗ್ಯ ಮುಖ್ಯ ಎಂದರು.

ಈ ಹಿನ್ನೆಲೆ ಜಿಲ್ಲೆಯ ಪೊಲೀಸ್ ಠಾಣೆಗಳಿಗೆ ತಲಾ ಒಂದು ಸ್ಯಾನಿಟೈಸರ್ ಸ್ಪ್ರೇಯರ್‌ಗಳನ್ನು ಮಠದಿಂದ ನೀಡಲಾಗಿದೆ ಎಂದು ಹೇಳಿದರು.

ಸ್ಯಾನಿಟೈಸರ್ ಸ್ಪ್ರೇಯರ್ ಪ್ರಾತ್ಯಕ್ಷಿಕೆ ಜರುಗಿತು. ಎಸ್ಪಿ ಜಿ.ರಾಧಿಕಾ, ಎಎಸ್ಪಿ ಎಂ.ಬಿ.ನಂದಗಾವಿ, ಡಿವೈಎಸ್ಪಿಗಳಾದ ಪಾಂಡುರಂಗ, ತಿಪ್ಪೇಸ್ವಾಮಿ, ಸಿಪಿಐಗಳಾದ ಬಿ.ವಿ.ಗಿರೀಶ್, ನಹೀಂ ಅಹಮದ್, ಪ್ರಕಾಶ್, ಎ.ಜೆ.ಪರಮಶಿವಯ್ಯ, ಎಂ.ಜಿ.ದೊರೆಸ್ವಾಮಿ, ಮಲ್ಲಿಕಾರ್ಜುನಯ್ಯ, ನಗರಸಭಾ ಸದಸ್ಯ ಸುರೇಶ್, ಬಿಜೆಪಿ ಮುಖಂಡ ಕಲ್ಲೇಶಯ್ಯ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net