

ಡಿಪಿಎನ್ ಶ್ರೇಷ್ಠಿ ಚಿತ್ರದುರ್ಗ: ಆರು ಕರೊನಾ ಸೋಂಕಿನ ಪ್ರಕರಣಗಳ ಪತ್ತೆಯಿಂದಾಗಿ ಕಳೆದ 3 ದಿನಗಳಿಂದ ನೆಮ್ಮದಿ ಕೆಡಿಸಿಕೊಂಡಿರುವ ಚಿತ್ರದುರ್ಗದ ಜನರಿಗೆ ತುಸು ನೆಮ್ಮದಿ ತರುವ ಸುದ್ದಿ ಕೇಳಿಬಂದಿದೆ.
ಜಿಲ್ಲಾ ಸರ್ವೇಕ್ಷಣಾ ಘಟಕದಲ್ಲಿ ಮೇ 13 ಅಥವಾ 14ರಿಂದ ಆರ್‌ಟಿಪಿಸಿಆರ್ ಲ್ಯಾಬ್ (್ಕಛಿಛ್ಟಿಛಿ ಠ್ಟಿಚ್ಞಠ್ಚ್ಟಜಿಠಿಜಿಟ್ಞ ಟ್ಝಞಛ್ಟಿಛಿ ್ಚಜ್ಞಿ ್ಟಛಿಚ್ಚಠಿಜಿಟ್ಞ) ಕಾರ್ಯಾರಂಭ ಮಾಡಲಿದೆ.
ಶೀಘ್ರದಲ್ಲೇ ನಗರದ ಜಿಲ್ಲಾಸ್ಪತ್ರೆಯಲ್ಲಿ ಕರೊನಾ ಸೋಂಕು ಪತ್ತೆ ಮಾಡುವ ಪ್ರಯೋಗಾಲಯ ಆರಂಭವಾಗಲಿದೆ.
ಈಗಾಗಲೇ ಸಂಬಂಧಿಸಿದ ಯಂತ್ರೋಪಕರಣಗಳು ಬಂದಿವೆ. ಇವುಗಳನ್ನು ಅಳವಡಿಸಿ, ಆಸ್ಪತ್ರೆಯ ಲ್ಯಾಬ್ ಟೆಕ್ನಿಷಿಯನ್‌ಗೆ ತರಬೇತಿ ಕೊಡಲು ತಂತ್ರಜ್ಞರು ಹಾಗೂ ಪ್ರಯೋಗಾಲಯ ತಜ್ಞರ ತಂಡ ಮೇ 11ರಂದು ನಗರಕ್ಕೆ ಬರಲಿದ್ದಾರೆ.
ರಾಜ್ಯದಲ್ಲಿ ಪ್ರಸ್ತುತ 32 ಪ್ರಯೋಗಾಲಯಗಳಲ್ಲಿ ಸೋಂಕು ಪತ್ತೆ ಕಾರ್ಯ ನಡೆಯುತ್ತಿದ್ದು, ದಾವಣಗೆರೆಯಲ್ಲಿ ಶನಿವಾರದಿಂದ ಒಂದು ಲ್ಯಾಬ್ ಕಾರ್ಯಾರಂಭವಾಗಿದೆ. ಸೋಂಕು ಪತ್ತೆ ಕಾರ್ಯ ಚುರುಕುಗೊಳಿಸಲು ರಾಜ್ಯದೆಲ್ಲ ಜಿಲ್ಲೆಗಳಲ್ಲೂ ಪ್ರಯೋಗಾಲಯ ಆರಂಭಿಸಲಾಗುವುದು, ಚಿತ್ರದುರ್ಗವೂ ಆದ್ಯತೆ ಪಟ್ಟಿಯಲ್ಲಿದೆ ಎಂದು ಆರೋಗ್ಯ ಸಚಿವ ಬಿ.ಶ್ರೀರಾಮುಲು ಹೇಳಿದ್ದರು.
ಕರೊನಾ ಭೀತಿ ಆವರಿಸಿದ ಅಂದಿನಿಂದ ಮೊದಲಿಗೆ ಜಿಲ್ಲೆಯ ಗಂಟಲು ದ್ರವದ ಮಾದರಿಗಳನ್ನು ಬೆಂಗಳೂರಿಗೆ ಕಳಿಸಲಾಗುತ್ತಿತ್ತು, ನಂತರದಲ್ಲಿ ಶಿವಮೊಗ್ಗಕ್ಕೆ ಕಳಿಸಲಾಗುತ್ತಿದ್ದಾರೂ ವರದಿಗೆ 2-3 ದಿನ ಕಾಯವುದು ಅನಿವಾರ್ಯವಾಗಿತ್ತು.
ಬಳ್ಳಾರಿ ವಿಮ್ಸ್‌ನಲ್ಳೂ ಪ್ರಯೋಗಾಲಯ ಆರಂಭವಾಗಿದ್ದರೂ ಶಿವಮೊಗ್ಗವನ್ನು ಅವಲಂಭಿಸುವುದು ದುರ್ಗಕ್ಕೆ ಅನಿವಾರ್ಯವಾಗಿತ್ತು. ಈ ಪ್ರಯೋಗಾಲಯಗಳಲ್ಲಿ ಒಂದು ವೇಳೆ ವರದಿ ಪಾಸಿಟಿವ್ ಎಂದಾದರೆ ಅದನ್ನು ಮತ್ತೊಮ್ಮೆ ದೃಢೀಕರಿಸಿಕೊಳ್ಳಲು ಪುಣೆಗೆ ಕಳಿಸಿ, ಅಂತಿಮ ಫಲಿತಾಂಶ ಪಡೆಯಲಾಗುತ್ತಿತ್ತು.
ನಿತ್ಯ 50 ಪ್ರಕರಣಗಳ ಪತ್ತೆ: ದುರ್ಗದಲ್ಲಿ ಆರಂಭವಾಗಲಿರುವ ಪ್ರಯೋಗಾಲಯದಲ್ಲಿ ನಿತ್ಯ 50 ಗಂಟಲು ದ್ರವದ ಮಾದರಿ ಪರೀಕ್ಷೆ ಮಾಡಬಹುದಾಗಿದೆ. ಕನಿಷ್ಠ ಒಂದು ಗಂಟೆಯಿಂದ ಗರಿಷ್ಠ ಏಳೆಂಟು ತಾಸಿನೊಳಗೆ ಫಲಿತಾಂಶ ಗೊತ್ತಾಗಲಿದೆ. ಪ್ರಸ್ತುತದಲ್ಲಿ ವರದಿಗಾಗಿ 38 ತಾಸು ಬೇಕಾಗಿದೆ. ಈ ಪ್ರಯೋಗಾಲಯ ತಲಾ 8 ತಾಸಿನಂತೆ ಮೂರು ಪಾಳಿಯಲ್ಲಿ ಕೆಲಸ ನಿರ್ವಹಿಸಲಿದೆ. ಸೋಂಕು ಹತೋಟಿಗೆ ಪೂರಕವಾಗಿ ಈ ಲ್ಯಾಬ್ ಸಹಕಾರಿ ಆಗಲಿದೆ.
ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ತುಳಸಿ ರಂಗನಾಥ್ ಹೇಳಿಕೆ: ಕರೊನಾ ಸೋಂಕು ಪತ್ತೆ ಸಲುವಾಗಿ ಶೀಘ್ರದಲ್ಲೇ ಜಿಲ್ಲಾಸ್ಪತ್ರೆಯಲ್ಲಿ ಆರ್‌ಟಿಪಿಸಿಆರ್ ಲ್ಯಾಬ್ ಕಾರ್ಯಾರಂಭ ಮಾಡಲಿದೆ. ಮೇ 11ರಂದು ಇದಕ್ಕೆ ಸಂಬಂಧಿಸಿದಂತೆ ತಜ್ಞರು ಆಗಮಿಸಿ, ಆಸ್ಪತ್ರೆ ಲ್ಯಾಬ್ ಟೆಕ್ನಿಷಿಯನ್‌ಗಳಿಗೆ ತರಬೇತಿ ಕೊಡಲಿದ್ದಾರೆ.