ಮನೆಯಲ್ಲೇ ರಂಜಾನ್ ಆಚರಿಸಿ

ANVER BASH K wakf board distc president
Published on

ಚಿತ್ರದುರ್ಗ: ಕೊರನಾ ಸೋಂಕು ಹಿನ್ನೆಲೆಯಲ್ಲಿ ರಂಜಾನ್ ಹಬ್ಬವನ್ನು ಮುಸ್ಲಿಮರು ಮನೆಗಳಲ್ಲಿಯೇ ಸರಳವಾಗಿ ಆಚರಿಸಬೇಕು ಎಂದು ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಕೆ.ಅನ್ವರ್ ಬಾಷಾ ತಿಳಿಸಿದ್ದಾರೆ.

ಹೊಸ ಬಟ್ಟೆ ಖರೀದಿಸದೆ ಇಫ್ತಾರ್ ಬದಲು ಬಡವರಿಗೆ ಸಹಾಯ ಮಾಡುವ ಮೂಲಕ ಹಬ್ಬವನ್ನು ಆಚರಿಸುವಂತೆ ಮನವಿ ಮಾಡಿದ್ದಾರೆ.

ಈದ್-ಉಲ್-ಫಿತರ್ ಸಮಯದಲ್ಲಿ ದರ್ಗಾ, ಈದ್ಗಾ ಹಾಗೂ ಮಸೀದಿಗಳಲ್ಲಿ ಸಲ್ಲಿಸುವ ಸಾಮೂಹಿಕ ಪ್ರಾರ್ಥನೆ ನಿಷೇಧಿಸಲಾಗಿದೆ. ಈದ್ ಆಚರಣೆ ವೇಳೆ ಗುಂಪು ಸೇರುವುದು, ಸಂಬಂಧಿಕರ ಹಾಗೂ ಸ್ನೇಹಿತರಿಗೆ ಕೈ ಕುಲುಕುವುದು, ತಬ್ಬಿಕೊಳ್ಳುವುದನ್ನು ಮಾಡಬಾರದು. ಈ ಮೂಲಕ ಕರೊನಾ ತಡೆಗೆ ಸಹಕರಿಸಬೇಕು ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net