ಸ್ವಾವಂಬನೆಗೆ ಕೇಂದ್ರದ ನೆರವು

Hanumante gwda BJP youth
Published on

ಚಿತ್ರದುರ್ಗ: ಕರೊನಾ ಸಂಕಷ್ಟದ ಸಮಯದಲ್ಲಿ 20 ಲಕ್ಷ ಕೋಟಿ ರೂ. ವಿಶೇಷ ಪ್ಯಾಕೇಜ್ ಪ್ರಕಟಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಸದೃಢ ಭಾರತಕ್ಕೆ ಮುನ್ನುಡಿ ಬರೆದಿದ್ದಾರೆಂದು ಬಿಜೆಪಿ ಹೇಳಿದೆ.

ಸಂಕಷ್ಟದ ಕಾಲದಲ್ಲಿ ರಾಷ್ಟ್ರಕ್ಕೆ ಪ್ಯಾಕೇಜ್ ಕೊಡುವುದರ ಮೂಲಕ ಆರ್ಥಿಕ ಪರಿಸ್ಥಿತಿ ಸಮರ್ಥ ನಿರ್ವಹಣೆ ನಿಟ್ಟಿನಲ್ಲಿ ಕೇಂದ್ರ ತೆಗೆದುಕೊಂಡಿರುವ ಈ ಕ್ರಮ ಹತಾಶವಾಗಿದ್ದ ದುಡಿಯುವ ಕೈಗಳಿಗೆ ಕೆಲಸ ಕೊಟ್ಟು ಪ್ರೋತ್ಸಾಹಿಸಲು ಅನುಕೂಲವಾಗಿದೆ.

ಸ್ವಾವಲಂಬಿ ಮತ್ತು ಸ್ವದೇಶಿ ಭಾರತದ ನಿರ್ಮಾಣಕ್ಕಾಗಿ ಯುವಜನರಲ್ಲಿ ಜಾಗೃತಿ ಅಗತ್ಯವಿದ್ದು, ಈ ನಿಟ್ಟಿನಲ್ಲಿ ಯುವ ಕಾರ್ಯಕರ್ತರ ಹೊಣೆ ಹೆಚ್ಚಾಗಿದೆ ಎಂದು ಯುವ ಮೋರ್ಚಾದ ಜಿಲ್ಲಾಧ್ಯಕ್ಷ ಬಿ.ಸಿ.ಹನುಮಂತೇಗೌಡ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net