ದುಡ್ಡಿದ್ರೂ ಟಾಸ್ಕ್‌ಫೋರ್ಸ್ ಸಭೆಗೆ ಲಾಕ್‌ಡೌನ್ ಬಿಸಿ

CTD 16 WATER (3)
Published on

ಡಿಪಿಎನ್ ಶ್ರೇಷ್ಠಿ ಚಿತ್ರದುರ್ಗ: ಕರೊನಾ ಕೂಗಿನಿಂದ ಕುಡಿವ ನೀರಿನ ಸಮಸ್ಯೆಯ ಧ್ವನಿ ಕ್ಷಿಣಿಸಿದೆ. ಸರ್ಕಾರವೇನೋ ಕುಡಿವ ನೀರಿಗೆ ಹಣಕಾಸು ವ್ಯವಸ್ಥೆ ಕಲ್ಪಿಸಿದ್ದರೂ ಸಮಸ್ಯಾತ್ಮಕ ಗ್ರಾಮಗಳಿಗೆ ನೀರು ಪೂರೈಸಲು ಶಾಸಕರ ಅಧ್ಯಕ್ಷತೆಯಲ್ಲಿ ನಡೆಯಬೇಕಿದ್ದ ಟಾಸ್ಕ್‌ಫೋರ್ಸ್ ಸಭೆಗಳಿಗೆ ಲಾಕ್‌ಡೌನ್ ಬಿಸಿ ತಟ್ಟಿದೆ.

ಜಿಲ್ಲೆಯಲ್ಲಿ ನೀರಿನ ಸಮಸ್ಯೆ ಉಲ್ಬಣಿಸ ಬಹುದಾದ 197 ಗ್ರಾಮಗಳ ಪಟ್ಟಿ ಸಿದ್ಧಪಡಿಸಲಾಗಿದೆ. ಸದ್ಯಕ್ಕೆ ಎಲ್ಲೂ ನೀರಿನ ಸಮಸ್ಯೆ ಇಲ್ಲ ಎಂದು ಇಲಾಖೆ ಹೇಳಿದರೂ ನೀರಿನ ಅಭಾವ ಎದುರಾಗಿರುವುದು ಸುಳ್ಳಲ್ಲ.

ನೀರಿನ ತೊಂದರೆ ಕಾಣಿಸಿದರೆ ಟ್ಯಾಂಕರ್ ಮೂಲಕ ನೀರು ಪೂರೈಸಲು ಹಾಗೂ ಕೊಳವೆ ಬಾವಿ ಕೊರೆಯಿಸಲು ಪಂಚಾಯತ್ ರಾಜ್ ಇಲಾಖೆಗೆ ಸೂಚಿಸಲಾಗಿದೆ. ಆರ್‌ಡಬ್ಲುೃಎಸ್ ಅಧಿಕಾರಿ, ಸಿಬ್ಬಂದಿಗೆ ಗ್ರಾಮಗಳಿಗೆ ತೆರಳಲು ಹಾಗೂ ಶುದ್ಧ ಕುಡಿವ ನೀರಿನ ಘಟಕಗಳ ದುರಸ್ತಿಗೆ ಪರಿಕರ ತರಿಸಲು ಸಾಧ್ಯವಾಗುತ್ತಿಲ್ಲ.

ಖಾಸಗಿ ಕೊಳವೆಬಾವಿ ಮೂಲಕ ನೀರು: ಚಿತ್ರದುರ್ಗ ತಾಲೂಕಿನ ಆಲಘಟ್ಟ ಗ್ರಾಪಂ ವ್ಯಾಪ್ತಿ ಚಿಕ್ಕಾಲಘಟ್ಟ, ಓಬವ್ವ ನಾಗತೀಹಳ್ಳಿ,ದೊಡ್ಡಾಲಘಟ್ಟ, ಕೋಗುಂಡೆ, ಬ್ಯಾಲಾಳು ಗ್ರಾಪಂ ವ್ಯಾಪ್ತಿ ಬ್ಯಾಲಾಳು,ಬೇಡರ ಶಿವನಕೆರೆ ಹಾಗೂ ಸೊಂಡೆಕೊಪ್ಪ ಗ್ರಾಪಂ ವ್ಯಾಪ್ತಿಯ ಕೆಲವು ಗ್ರಾಮಗಳಲ್ಲಿ ನೀರಿನ ಸಮಸ್ಯೆ ಇದೆ. ಕಾಲಗೆರೆ, ಆಜಾದ್‌ನಗರ, ಕೋಗುಂಡೆ ಗ್ರಾಮಕ್ಕೆ ಖಾಸಗಿ ಕೊಳವೆ ಬಾವಿಗಳ ಮೂಲಕ ನೀರು ಪೂರೈಸಲಾಗುತ್ತಿದೆ ಎಂದು ತಾಪಂ ಇಒ ಎಚ್.ಕೃಷ್ಣನಾಯಕ್ ತಿಳಿಸಿದ್ದಾರೆ.

ಹಣ ಬಿಡುಗಡೆ: ಚಿತ್ರದುರ್ಗ, ಚಳ್ಳಕೆರೆ, ಮೊಳಕಾಲ್ಮೂರು ತಾಲೂಕುಗಳಿಗೆ ತಲಾ 50 ಲಕ್ಷ ರೂ. ನೀಡಲಾಗಿದೆ ಇದಲ್ಲದೆ ಈ ತಾಲೂಕುಗಳ ಟಾಸ್ಕ್ ಫೋರ್ಸ್ ಕಮಿಟಿಗೆ ತಲಾ 25 ಲಕ್ಷ, ಸಿಇಒ ವಿವೇಚನಾ ನಿಧಿಯಿಂದ ತಲಾ 25 ಲಕ್ಷ ರೂ.ಕೊಡಲಾಗಿದೆ. ಹೊಳಲ್ಕೆರೆ, ಹೊಸದುರ್ಗ. ಹಿರಿಯೂರು ತಾಲೂಕುಗಳಿಗೆ ತಲಾ 10 ಲಕ್ಷ ರೂ. ಟಾಸ್ಕ್ ಫೋರ್ಸ್ ಕಮಿಟಿಗಳಿಗೆ ತಲಾ 25 ಲಕ್ಷ ಸಿಇಒ ವಿವೇಚನಾ ನಿಧಿಯಡಿ ತಲಾ 5 ಲಕ್ಷ ರೂ.ಒದಗಿಸಲಾಗಿದೆ.

ಟ್ಯಾಂಕರ್ ನೀರು: ಕಳೆದ ವರ್ಷ ಜಿಲ್ಲೆಯ 132 ಗ್ರಾಮಗಳಿಗೆ 173 ಟ್ಯಾಂಕರ್‌ಗಳಲ್ಲಿ ನೀರು ಪೂರೈಸಲಾಗಿತ್ತು. ಪ್ರಸ್ತುತ ಎಲ್ಲೂ ಟ್ಯಾಂಕರ್ ನೀರು ಪೂರೈಸಲಾಗುತ್ತಿಲ್ಲ. ಆದರೆ, ಅಗತ್ಯ ಸಿದ್ಧತೆ ನಡೆದಿದೆ.

ನೀರಿನ ಘಟಕಗಳು: ಜಿಲ್ಲೆಯಲ್ಲಿ 1056 ಶುದ್ಧ ಕುಡಿವ ನೀರಿನ ಘಟಕಗಳಿವೆ. ಖಾಸಗಿ ಸಂಸ್ಥೆಗಳಿಗೆ ಕೆಟ್ಟಿರುವ ಘಟಕಗಳ ದುರಸ್ತಿ ಹೊಣೆ ವಹಿಸಲಾಗಿದೆ.

1.77 ಕೋಟಿ ರೂ. ಬಿಡುಗಡೆ: ಜಿಲ್ಲೆಯಲ್ಲಿರುವ ಶುದ್ಧ ಕುಡಿವ ನೀರಿನ ಘಟಕಗಳ ಪೈಕಿ 189 ಘಟಕಗಳ ದುರಸ್ತಿಗೆ ಜಿಪಂ 1.77 ಕೊಟಿ ರೂ. ಗೆ ಬಿಡುಗಡೆ ಮಾಡಿದೆ. ಜಿಲ್ಲೆಯ ಎಲ್ಲ ಘಟಕಗಳ ನಿರ್ವಹಣೆಯನ್ನು ಖಾಸಗಿ ಗುತ್ತಿಗೆದಾರರಿಗೆ ವಹಿಸಲಾಗಿದೆ. ಒಪ್ಪಂದದಂತೆ ಘಟಕಗಳನ್ನು ಸುಸ್ಥಿತಿಯಲ್ಲಿ ಗುತ್ತಿಗೆದಾರರಿಗೆ ಇಲಾಖೆ ವಹಿಸಬೇಕಿದೆ.

ಚಳ್ಳಕೆರೆ-68-43.63. ಚಿತ್ರದುರ್ಗ-22-34.13. ಹಿರಿಯೂರು-46-36.99. ಹೊಳಲ್ಕೆರೆ-25-24.89. ಹೊಸದುರ್ಗ-15-19.57. ಮೊಳಕಾಲ್ಮೂರು-13-18.24.

ತಾಲೂಕು-ದುರಸ್ತಿ ಆಗಬೇಕಿರುವ ಘಟಕಗಳ ಸಂಖ್ಯೆ-ಮೊತ್ತ (ಲಕ್ಷ ರೂ. ಗಳಲ್ಲಿ)

ನೀರಿನ ಸಮಸ್ಯೆ ನೀಗಿಸಲು ತಾಲೂಕು ಮಟ್ಟದಲ್ಲಿ ಸಹಾಯವಾಣಿಯನ್ನು ಜಿಪಂ ಆರಂಭಿಸಿದೆ: ಇಇ-ಗ್ರಾನೀನೈ ಇಲಾಖೆ ಕಚೇರಿ-ಚಿತ್ರದುರ್ಗ-234488. ಇಒ-ತಾಪಂ ಕಚೇರಿ-ಚಿತ್ರದುರ್ಗ-230232. ಇಒ-ತಾಪಂ ಕಚೇರಿ-ಚಳ್ಳಕೆರೆ-250251. ಇಒ-ತಾಪಂ ಕಚೇರಿ-ಹಿರಿಯೂರು-271210. ಇಒ-ತಾಪಂ ಕಚೇರಿ-ಹೊಸದುರ್ಗ-230241. ಇಒ-ತಾಪಂ ಕಚೇರಿ-ಹೊಳಲ್ಕೆರೆ-275208. ಇಒ-ತಾಪಂ ಕಚೇರಿ-ಮೊಳಕಾಲ್ಮೂರು-229232.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net