ಶುಭ ಕಾರ್ಯಗಳನ್ನು 1 ವಾರ ಮುಂದೂಡಿ

DC VINOD PRIYA (1)
Published on

ಚಿತ್ರದುರ್ಗ: ಕರೊನಾ ನಿಯಂತ್ರಣ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಮದುವೆ, ಗೃಹ ಪ್ರವೇಶ, ನಾಮಕರಣ ಇತ್ಯಾದಿಗಳನ್ನು ಕನಿಷ್ಠ ಒಂದು ವಾರಗಳ ಕಾಲ ಮುಂದೂಡಬೇಕು ಎಂದು ಡಿಸಿ ಆರ್.ವಿನೋತ್ ಪ್ರಿಯಾ ಆದೇಶಿಸಿದ್ದಾರೆ.

ಒಂದು ವೇಳೆ ಶುಭಾ ಕಾರ್ಯಗಳ ಆಚರಣೆ ಅನಿವಾರ್ಯವಾದರೆ ಮನೆಯಲ್ಲೇ ಸರಳವಾಗಿ ಆಚರಿಸಬೇಕು ಎಂದು ಸೂಚಿಸಿದ್ದಾರೆ. ಸಿನಿಮಾ ಮಂದಿರ, ಮಾಲ್, ಪಬ್, ನೈಟ್‌ಕ್ಲಬ್‌ಗಳು, ಕ್ರೀಡಾಕೂಟ, ಈಜುಕೊಳ, ಜಿಮ್, ಬೇಸಿಗೆ ಶಿಬಿರಗಳನ್ನು ಮುಚ್ಚುವಂತೆ ಸೂಚಿಸಿದ್ದಾರೆ. ಹೋಟೆಲ್ ಮತ್ತಿತರ ಸ್ಥಳಗಳಲ್ಲಿ ಹೆಚ್ಚಿನ ಜನ ದಟ್ಟಣೆ ಉಂಟಾಗಬಾರದು ಎಂದು ತಿಳಿಸಿದ್ದಾರೆ.

ಸ್ವಯಂ ದಿಗ್ಬಂಧನಕ್ಕೆ ಸೂಚನೆ: ವಿದೇಶಗಳಿಂದ ಜಿಲ್ಲೆಗೆ ಬಂದಂಥವರು ರೋಗ ಲಕ್ಷಣ ಇಲ್ಲದಿದ್ದರೂ ಯಾರನ್ನೂ ಭೇಟಿ ಮಾಡದೇ 14 ದಿನಗಳ ಕಾಲ ಸ್ವಯಂ ದಿಗ್ಭಂಧನ ಹಾಕಿಕೊಳ್ಳಬೇಕು ಹಾಗೂ ಅವರು ಜಿಲ್ಲಾಡಳಿತಕ್ಕೆ ಮಾಹಿತಿ ಕೊಡಬೇಕು. ಶಾಲಾ, ಕಾಲೇಜುಗಳ ಜತೆ ಕೋಚಿಂಗ್ ಸೆಂಟರ್‌ಗಳನ್ನು ಮುಚ್ಚಬೇಕು. ಖಾಸಗಿ ವೈದ್ಯರು, ಆಸ್ಪತ್ರೆಗಳು ವಿದೇಶಿಗಳಿಂದ ಬಂದವರ ಮಾಹಿತಿ ಇದ್ದರೆ ತಿಳಿಸಬೇಕು. ಸರ್ಕಾರಿ ಆದೇಶವನ್ನು ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಡಿಸಿ ಎಚ್ಚರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net