

ಚಿತ್ರದುರ್ಗ: ಕರೊನಾ ನಿಯಂತ್ರಣ ನಿಟ್ಟಿನಲ್ಲಿ ಜಿಲ್ಲೆಗೆ ಹಿಂತಿರುಗಿದ ಹಾಗೂ ವಲಸೆ ಬಂದವರ ಮೇಲೆ ಹದ್ದಿನ ಕಣ್ಣಿಡಲು ಜಿಲ್ಲಾಧಿಕಾರಿ ಆರ್.ವಿನೋತ್‌ಪ್ರಿಯಾ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಶನಿವಾರ ನಡೆದ ಜಿಲ್ಲಾ ಮಟ್ಟದ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ಮಾತನಾಡಿ, ಬೆಂಗಳೂರು ಸೇರಿ ಸೋಂಕು ಹೆಚ್ಚಿರುವ ರಾಜ್ಯಗಳಿಂದ ಜಿಲ್ಲೆಗೆ ಹಿಂತಿರುಗಿದ 24 ಸಾವಿರಕ್ಕೂ ಹೆಚ್ಚು ಜನರ ಮೇಲೆ 14 ದಿನ ನಿಗಾ ವಹಿಸ ಬೇಕೆಂದರು.
ಬಿಪಿಎಲ್ ಕಾರ್ಡ್ ಇಲ್ಲದಿದ್ದರೂ ಕಾರ್ಮಿಕರಿಗೆ ಆಹಾರ ಪೂರೈಸಲು ಕಾರ್ಮಿಕ ಇಲಾಖೆ ಅಧಿಕಾರಿಗಳು ಕಾರ್ಮಿಕರ ಕುಟುಂಬ ಭೇಟಿ ಮಾಡಿ ಸಮಾಲೋಚಿಸಲು ಸಲಹೆ ನೀಡಿದರು.
ಕೃಷಿ ಚಟುವಟಿಕೆಗೆ ಲಾಕ್‌ಡೌನ್‌ನಿಂದ ತೊಂದರೆ ಆಗಬಾರದು. ಅಗತ್ಯ ಬಿತ್ತನೆ ಬೀಜ, ಗೊಬ್ಬರ, ಕೃಷಿ ಉಪಕರಣ ಪಡೆಯಲು ಸಿದ್ಧತೆ ಮಾಡಿಕೊಳ್ಳುವಂತೆ ಕೃಷಿ ಇಲಾಖೆ ಅಧಿಕಾರಿಗೆ ಸೂಚಿಸಿದರು.
ನೀರಿಗೆ ಕಂಟ್ರೋಲ್ ರೂಂ: ಬೇಸಿಗೆ ವೇಳೆ ಕುಡಿವ ನೀರಿನ ತೊಂದರೆಯಾಗದಂತೆ ಎಚ್ಚರವಹಿಸಬೇಕು. ನೀರು ಶುದ್ಧೀಕರಣ ಘಟಕಗಳು ಕೆಟ್ಟಿದ್ದರೆ ದುರಸ್ತಿ ಮಾಡಿಸಬೇಕು. ನೀರಿನ ಸಮಸ್ಯೆ ಪರಿಹಾರಕ್ಕೆ ಕಂಟ್ರೋಲ್ ರೂಂ.ಪ್ರಾರಂಭಿಸುವಂತೆ ಜಿಲ್ಲಾಧಿಕಾರಿ ಸೂಚಿಸಿದರು.
ಜಂಟಿಕೃಷಿ ನಿರ್ದೇಶಕ ಡಾ.ವಿ.ಸದಾಶಿವ, ಜಿಪಂ ಸಿಇಒ ಎಸ್.ಹೊನ್ನಾಂಬ,ಎಸ್ಪಿ ಜಿ.ರಾಧಿಕಾ, ಎಡಿಸಿ ಸಿ.ಸಂಗಪ್ಪ,ಎಸಿ ವಿ.ಪ್ರಸನ್ನ, ಎಎಸ್ಪಿ ಎ.ಬಿ.ನಂದಗಾವಿ, ಜಿಲ್ಲಾ ನಗರ ಯೋಜನಾಧಿಕಾರಿ ರಾಜಶೇಖರ್,ಡಿಎಚ್‌ಒ ಡಾ.ಸಿ.ಎಲ್.ಪಾಲಾಕ್ಷ ಮತ್ತಿತರರು ಇದ್ದರು.