ಜನತಾ ಕರ್ಫ್ಯೂವಿಗೆ ಬೆಂಬಲ

JAGADISH KG
Published on

ಚಿತ್ರದುರ್ಗ: ಕರೊನಾ ನಿಯಂತ್ರಣ ನಿಟ್ಟಿನಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಕರೆ ನೀಡಿರುವ ಮಾ.22ರ ಜನತಾ ಕರ್ಫ್ಯೂವಿಗೆ ಜಿಲ್ಲೆಯ ಸರ್ಕಾರಿ ನೌಕರರ ಸಂಘ ಬೆಂಬಲ ಸೂಚಿಸಿದೆ.

ಜಿಲ್ಲೆಯಲ್ಲಿರುವ 28 ಸಾವಿರ ನೌಕರರು ಮತ್ತು ಅವಲಂಬಿತರು ಅಂದು ಮನೆ ಹೊರ ಬರ ಬರದೆ, ಅಂದು ಸಂಜೆ 5ಕ್ಕೆ ನಮ್ಮ ಸುರಕ್ಷತೆಗಾಗಿ ದುಡಿಯುವವರಿಗೆ ಚಪ್ಪಾಳೆ ತಟ್ಟಿ ಕೃತಜ್ಞತೆ ಅರ್ಪಿಸೋ, ವೈರಸ್ ನಿಯಂತ್ರಿಸುವ ನಿಟ್ಟಿನಲ್ಲಿ ಸುರಕ್ಷತಾ ಕ್ರಮಗಳನ್ನು ಪಾಲಿಸೋಣವೆಂಬ ಸಿಎಂ ಬಿ.ಎಸ್.ಯಡಿಯೂರಪ್ಪರ ಮನವಿಗೆ ಸ್ಪಂದಿಸೋಣವೆಂದು ಸಂಘದ ಅಧ್ಯಕ್ಷ ಕೆ.ಜಿ.ಜಗದೀಶ್ ಕೋರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net