ತ್ಯಾಗರಾಜ ಮಾರುಕಟ್ಟೆಗೆ ಹೊಸ ಕಟ್ಟಡ

THIPPAREDDY (3)
Published on

ಚಿತ್ರದುರ್ಗ: ನಗರದ ವಾಸವಿ ಶಾಲೆ ಬಳಿ ಶಿಥಿಲಗೊಂಡಿರುವ ತ್ಯಾಗರಾಜ ಮಾರುಕಟ್ಟೆ ಸ್ಥಳದಲ್ಲಿ ಹೊಸ ಕಟ್ಟಡ ನಿರ್ಮಾಣ ಮಾಡಲಾಗುವುದು ಎಂದು ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ತಿಳಿಸಿದರು.

ಐಯ್ಯನಪೇಟೆ 5ನೇ ವಾರ್ಡ್‌ನಲ್ಲಿರುವ ಮಾರುಕಟ್ಟೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಭಾನುವಾರ ಸ್ಥಳ ಪರಿಶೀಲಿಸಿ ಮಾತನಾಡಿ, ಅಂದಾಜು 3 ಕೋಟಿ ರೂ. ವೆಚ್ಚದಲ್ಲಿ ಇಂದಿನ ಅಗತ್ಯಕ್ಕೆ ತಕ್ಕಂತೆ ಮೂರು ಅಂತಸ್ತಿನ ಮಾರುಕಟ್ಟೆ ನಿರ್ಮಾಣಕ್ಕೆ ಯೋಜಿಸಲಾಗಿದೆ ಎಂದರು.

ನಗರಸಭೆ ಸದಸ್ಯರಾದ ಹರೀಶ್, ವೆಂಕಟೇಶ್, ವೇದಮೂರ್ತಿ, ಆಯುಕ್ತ ಜೆ.ಟಿ.ಹನುಮಂತರಾಜು, ಮಾಜಿ ಸದಸ್ಯ ಲಿಂಗರಾಜು, ಇಂಜಿನಿಯರ್‌ಗಳಾದ ಮನೋಹರ್, ಕಿರಣ್, ಬಡಾವಣೆ ಹಿರಿಯರಾದ ಮೋಕ್ಷಗುಂಡಂ, ಕುಮಾರ್, ಪ್ರಾಣೇಶ್, ಮಹಮದ್ ಖಾನ್, ಶಶಿಕಲಾ ರವಿಶಂಕರ್ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net