ಸಿದ್ದುನಾ ಹೊಡೆದಾಕಿ ಹೇಳಿಕೆಗೆ ಕೈ ಗರಂ

Chitradurga, Congress, protest,
Published on

ಚಿತ್ರದುರ್ಗ: ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಹೊಡೆದು ಹಾಕಿ ಎಂದು ಹೇಳಿಕೆ ನೀಡಿರುವ ಸಚಿವ ಡಾ.ಸಿ.ಎನ್.ಅಶ್ವತ್ಥ್ ನಾರಾಯಣ ವಿರುದ್ಧ ಕಾಂಗ್ರೆಸ್ ಕಾರ‌್ಯಕರ್ತರು ನಗರದ ಒನಕೆ ಓಬವ್ವ ವೃತ್ತದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.

ಅಶ್ವತ್ಥ್‌ನಾರಾಯಣ ಮಾನಸಿಕ ಅಸ್ವಸ್ಥರಾಗಿರುವ ರೀತಿ ಹೇಳಿಕೆ ನೀಡಿದ್ದಾರೆ. ಜನರನ್ನು ಪ್ರಚೋದಿಸುವ ರೀತಿ ಭಾಷಣ ಮಾಡುತ್ತಿರುವ ಇವರನ್ನು ಸಚಿವ ಸಂಪುಟದಿಂದ ವಜಾಗೊಳಿಸಬೇಕು. ಇದೇ ರೀತಿ ಹೇಳಿಕೆ ನೀಡುತ್ತಿರುವ ಬಿಜೆಪಿ ರಾಜ್ಯಾಧ್ಯಕ್ಷರ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಅಶ್ವತ್ಥ್ ನಾರಾಯಣ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಇಬ್ಬರು ಜನರ ಭಾವನೆ ಕೆರಳಿಸುವ ರೀತಿ ಉದ್ದೇಶಪೂರ್ವಕವಾಗಿ ಹೇಳಿಕೆ ನೀಡುತ್ತಿದ್ದು, ಶಾಂತಿ ಕದಡುವ ಕೆಲಸ ಮಾಡುತ್ತಿದ್ದಾರೆ. ಪೊಲೀಸರು ಇವರಿಬ್ಬರನ್ನು ಕೂಡಲೇ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ನಗರಸಭೆ ಮಾಜಿ ಅಧ್ಯಕ್ಷ ಎಚ್.ಮಂಜಪ್ಪ, ಪಕ್ಷದ ಜಿಲ್ಲಾಧ್ಯಕ್ಷ ಎಂ.ಕೆ.ತಾಜ್‌ಪೀರ್, ಉಪಾಧ್ಯಕ್ಷರಾದ ನಾಗರಾಜ್ ಜಾನವಿ, ಡಿ.ಎನ್.ಮೈಲಾರಪ್ಪ, ಮುಖಂಡರಾದ ಬಿ.ಟಿ.ಜಗದೀಶ್, ಆರ್.ಶೇಷಣ್ಣಕುಮಾರ್, ಸಂದೀಪ್, ಕುಮಾರ್, ಮೋಹನ್ ಪೂಜಾರ್, ಮಹೇಶ್, ಮಹಮ್ಮದ್, ಆರಿಫ್, ಸೈಯದ್ ಖುದ್ದೂಸ್, ಮರುಳಾರಾಧ್ಯ, ಪ್ರಕಾಶ್‌ನಾಯ್ಕ, ಎಸ್.ಎಸ್.ರವಿಕುಮಾರ್, ಅನೀಲ್ ಕೋಟಿ, ಮಹಡಿ ಶಿವಮೂರ್ತಿ, ಕೃಷ್ಣಪ್ಪ, ನೇತಾಜಿ ತಿಪ್ಪೇಸ್ವಾಮಿ, ಕೃಷ್ಣಮೂರ್ತಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net