

ಚಿತ್ರದುರ್ಗ: ಕಾಂಗ್ರೆಸ್ ಬಿಟ್ಟು ಹೋದಂಥವರು ಮತ್ತೆ ಪಕ್ಷ ಸೇರಲು ಬಯಸಿದರೆ ಅವರನ್ನು ಸಂಪರ್ಕಿಸಿ ವರದಿ ಸಲ್ಲಿಸುವ ಸಲುವಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮಾಜಿ ಸಚಿವ ಅಲ್ಲಂ ವೀರಭದ್ರಪ್ಪ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿದ್ದಾರೆ.
ಸಂಚಾಲಕರಾಗಿ ಮಾಜಿ ಶಾಸಕ ಬಿ.ಎ.ಹಸನಬ್ಬ, ಸದಸ್ಯರಾಗಿ ಶಾಸಕ ವಿ.ಮುನಿಯಪ್ಪ, ಮಾಜಿ ಶಾಸಕರಾದ ಅಜಯ ಕುಮಾರ್, ಅಭಯ ಚಂದ್ರ ಜೈನ್, ಸತೀಶ್ ಶೈಲ್, ಪ್ರಫುಲ್ಲಾ ಮಧುಕರ್, ಮಾಜಿ ಸಂಸದರಾದ ಬಿ.ಎನ್.ಚಂದ್ರಪ್ಪ, ಆರ್.ಧ್ರುವನಾರಾಯಣ್, ಪ್ರಮುಖರಾದ ವಿ.ವೈ.ಘೋರ್ಪಡೆ, ಕೃಪಾ ಆಳ್ವಾ ಅವರನ್ನು ನೇಮಿಸಲಾಗಿದೆ.