ಕಬೀರಾನಂದಾಶ್ರಮದಿಂದ ನೆರವು

CTD 9 kabira sree
Published on

ಚಿತ್ರದುರ್ಗ: ನಗರದ ಶ್ರೀ ಕಬೀರಾನಂದಾಶ್ರಮದದಿಂದ ಬಡವರಿಗೆ ಗುರುವಾರ ಆಹಾರ ಧಾನ್ಯ ವಿತರಿಸಲಾಯಿತು.

ಚಳ್ಳಕೆರೆ ಗೇಟ್ ಬಳಿ ಶ್ರೀ ಶಿವಲಿಂಗಾನಂದ ಸ್ವಾಮೀಜಿ ಬಡವರಿಗೆ ಅಕ್ಕಿ ಮತ್ತು ರಾಗಿ ವಿತರಿಸಿದರು.

ಬಳಿಕ ಮಾತನಾಡಿ, ಅಗತ್ಯವುಳ್ಳವಂಥವರು ನಮ್ಮ ಆಶ್ರಮ ಅಥವಾ ಕಲ್ಯಾಣ ಮಂಟಪವನ್ನು ಸಂಪರ್ಕಿಸಬಹುದಾಗಿದೆ. ಚಿತ್ರದುರ್ಗದಲ್ಲಿ ಕೂಲಿ ಸೇರಿ ವಿವಿಧ ಕೆಲಸಗಳ ನಿಮಿತ್ತ ಬಂದವರು ಬೇರೆ ಕಡೆಯಿಂದ ಬಂದವರಿಗೆ ಈ ರೀತಿಯಾದ ಆಹಾರ ವ್ಯವಸ್ಥೆಯನ್ನು ಮಾಡಲಾಗುತ್ತದೆ ಎಂದು ಹೇಳಿದರು. ಆಶ್ರಮದ ನಿರಂಜನಮೂರ್ತಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net