ಕರೊನಾ ವಾರಿಯರ್ಸ್ ಮೇಲೆ ಪುಷ್ಪಾರ್ಚನೆ

ctd 29 police
Published on

ಚಿತ್ರದುರ್ಗ: ನಗರ ಠಾಣೆ ವ್ಯಾಪ್ತಿಯ ವಿವಿಧೆಡೆ ಬುಧವಾರ ಸಂಜೆ ಕರೊನಾ ಸೋಂಕಿನ ವಿರುದ್ಧ ಪೊಲೀಸರು ಹಮ್ಮಿಕೊಂಡಿದ್ದ ಜಾಗೃತಿ ಜಾಥಾವನ್ನು ನಾಗರಿಕರು ಪುರ್ಷ್ಪಾಷಚನೆ ಮೂಲಕ ಸ್ವಾಗತಿಸಿದರು.

ಸಿ.ಕೆ.ಪುರ, ಕೆಳಗೋಟೆ, ಅಂಬೇಡ್ಕರ್ ನಗರದ ಪ್ರಮುಖ ರಸ್ತೆಗಳಲ್ಲಿ ನಡೆದ ಜಾಥಾ ನೇತೃತ್ವವನ್ನು ಎಸ್ಪಿ ಜಿ.ರಾಧಿಕಾ ವಹಿಸಿದ್ದರು.

ಈ ವೇಳೆ ಮಾತನಾಡಿದ ಎಸ್ಪಿ, ಲಾಕ್‌ಡೌನ್ ಅನ್ನು ಅಗತ್ಯ ಸೇವೆಗಳಿಗೆಂದು ಸಡಿಲಗೊಳಿಸಿದ್ದರೂ ನಾಗರಿಕರು ಅನಗತ್ಯ ಓಡಾಟಕ್ಕೆ ಸ್ವಯಂ ನಿಯಂತ್ರಣ ಹಾಕಿಕೊಳ್ಳ ಬೇಕೆಂದು ಮನವಿ ಮಾಡಿದರು.

ಎಎಸ್ಪಿ ಎಂ.ಬಿ.ನಂದಗಾವಿ, ಡಿವೈಎಸ್ಪಿಗಳಾದ ಪಾಂಡುರಂಗಪ್ಪ. ನಗರಸಭಾ ಸದಸ್ಯ ದೀಪಕ್ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net