ಜೆಇಇ ಮೇನ್ಸ್‌ನಲ್ಲಿ ಎಸ್‌ಆರ್‌ಎಸ್ ಉತ್ತಮ ಸಾಧನೆ

4.ctd 23 RACHANA C M
Published on

ಚಿತ್ರದುರ್ಗ: ನಗರದ ಎಸ್‌ಆರ್‌ಎಸ್ ಪಿಯು ಕಾಲೇಜು ಜೆಇಇ ಮೇನ್ಸ್ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆದಿದೆ.

ಕಾಲೇಜಿನ ವಿದ್ಯಾರ್ಥಿ ಅಭಿಷೇಕ್ ಶೇ. 96.29, ಎಸ್.ಚಿರಾಗ್- ಶೇ.96.25, ಜಿ.ಪಿ.ಗೌರಂಗ್ ಮಂಜುನಾಥ್- ಶೇ.94.82, ಸಿ.ಎಂ.ರಚನಾ- ಶೇ.94.72, ಎ.ಆರ್.ಆರ‌್ಫಾ- ಶೇ. 92.02, ಮನಸ್ವಿ ಕೌಶಿಕ್- ಶೇ. 90.23, ಎನ್.ಭೂಮಿಕಾ ಶೇ.90ರಷ್ಟು ಅಂಕ ಪಡೆದು ಟಾಪರ್ಸ್‌ ಆಗಿ ಹೊರಹೊಮ್ಮಿದ್ದಾರೆ.

ಗೌರಂಗ್ ಮಂಜುನಾಥ್ ರಸಾಯನ ಶಾಸ್ತ್ರದಲ್ಲಿ ಶೇ.99.25, ಎಸ್.ಭೂಮಿಕಾ ಭೌತ ಶಾಸ್ತ್ರದಲ್ಲಿ ಶೇ. 95.76 ಹಾಗೂ ಎಸ್.ಚಿರಾಗ್ ಗಣಿತ ಶಾಸ್ತ್ರದಲ್ಲಿ ಶೇ.97.55 ಅಂಕ ಪಡೆದಿದ್ದಾರೆ.

30 ವಿದ್ಯಾರ್ಥಿಗಳು ಶೇ.80ಕ್ಕೂ ಅಧಿಕ, 42 ವಿದ್ಯಾರ್ಥಿಗಳು ಶೇ.70 ಹಾಗೂ 49 ವಿದ್ಯಾರ್ಥಿಗಳು ಶೇ.60ಕ್ಕೂ ಹೆಚ್ಚಿನ ಅಂಕ ಗಳಿಸಿದ್ದಾರೆಂದು ಕಾಲೇಜ್ ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net