

ಚಿತ್ರದುರ್ಗ: ನಗರದ ರೋಟರಿ ಕ್ಲಬ್ ಚಿತ್ರದುರ್ಗ ಫೋರ್ಟ್ ಕಳೆದ 17 ದಿನಗಳಿಂದಲೂ ಜಿಲ್ಲಾಸ್ಪತ್ರೆ ಆವರಣದಲ್ಲಿ ರೋಗಿ ಮತ್ತು ರೋಗಿಗಳ ಸಂಬಂಧಿಕರಿಗೆ ಉಚಿತ ಊಟೋಪಚಾರ ವ್ಯವಸ್ಥೆಯನ್ನು ಕಲ್ಪಿಸಿದೆ.
ಸ್ಥಳಕ್ಕೆ ಸೋಮವಾರ ಭೇಟಿ ನೀಡಿ ವ್ಯವಸ್ಥೆ ಪರಿಶೀಲಿಸಿದ ಕ್ಲಬ್ ಪ್ರಮುಖರು, ಆಸ್ಪತ್ರೆಗೆ ಬರುವಂಥ ರೋಗಿಗಳು ಅವರ ಸಂಬಂಧಿಕರು ಊಟ ತಿಂಡಿಗೆ ಪರದಾಡುವುದನ್ನು ತಪ್ಪಿಸಲು ಈ ಕಾರ್ಯವನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಕ್ಲಬ್ ಅಧ್ಯಕ್ಷ ನಾಗೇಂದ್ರಬಾಬು, ಪ್ರಮುಖರಾದ ಎಂ.ಕೆ.ರವೀಂದ್ರ, ಮಾರುತಿ ಮೋಹನ್, ಸಿ.ವಿ.ಮಾರುತೇಶ್, ಶಶಿಧರ್, ಸುರೇಶ್‌ರಾಜ್, ಎಚ್.ಕೇದಾರ್, ಅಬಿದ್ ಹುಸೇನ್, ವಿಶ್ವನಾಥ್ ಮತ್ತಿತರರು ಇದ್ದರು.