

ಚಿತ್ರದುರ್ಗ: ನಗರದಲ್ಲಿ ಶುಕ್ರವಾರ ಮಧ್ಯಾಹ್ನ ಅರ್ಧ ತಾಸಿಗೂ ಅಧಿಕ ಕಾಲ ಉತ್ತಮ ಮಳೆಯಾಗಿದೆ. ಹೊಸದುರ್ಗದಲ್ಲಿ ಜೂನ್ 25ರಂದು 106 ಮಿ.ಮೀ. ಅತಿ ಹೆಚ್ಚು ಮಳೆಯಾಗಿದೆ.
ಬಾಗೂರು 37, ಮತ್ತೋಡು 10.2, ಶ್ರೀರಾಂಪುರ 12, ಮಾಡದಕೆರೆ 60, ಹೊಳಲ್ಕೆರೆ 33.6, ಎಚ್.ಡಿ.ಪುರ 76, ತಾಳ್ಯ 55.3, ರಾಮಗಿರಿ 40.4, ಚಳ್ಳಕೆರೆ 7.2, ಪರಶುರಾಂಪುರ 3, ನಾಯಕನಹಟ್ಟಿ 20.2,ದೇವರಮರಿಕುಂಟೆ 7.6, ತಳಕು 10, ಚಿತ್ರದುರ್ಗ-1ರಲ್ಲಿ 65, ಚಿತ್ರದುರ್ಗ-2ರಲ್ಲಿ 52.2, ಐನಹಳ್ಳಿ 43.6, ಭರಮಸಾಗರ 11.4, ಸಿರಿಗೆರೆ 5.6, ತುರುವನೂರು 56.4, ಹಿರೇಗುಟನೂರು 1, ಮೊಳಕಾಲ್ಮೂರಲ್ಲಿ 81.4, ಬಿ.ಜಿ.ಕೆರೆ 3.6, ರಾಂಪುರ 6, ದೇವಸಮುದ್ರ 52 ಹಾಗೂ ರಾಯಾಪುರ 84.4 ಮಿ.ಮೀ. ಮಳೆಯಾಗಿದೆ.