ರೈಲ್ವೆ ನಿಲ್ದಾಣದಲ್ಲಿ ಆರೋಗ್ಯ ತಪಾಸಣೆ

CTD RAILU 23
Published on

ಚಿತ್ರದುರ್ಗ: ನಗರದ ರೈಲ್ವೆ ನಿಲ್ದಾಣಕ್ಕೆ ಸೋಮವಾರ ಹೊರ ರಾಜ್ಯದಿಂದ ಬಂದಿಳಿದ ಪ್ರಯಾಣಿಕರಿಗೆ ಮುನ್ನೆಚ್ಚರಿಕೆ ಕ್ರಮವಾಗಿ ಆರೋಗ್ಯ ಇಲಾಖೆ ಅಧಿಕಾರಿಗಳು ಆರೋಗ್ಯ ತಪಾಸಣೆ ನಡೆಸಿದರು.

ಯಾವುದೇ ಸೋಂಕು ಲಕ್ಷಣ ಕಂಡು ಬಂದಿಲ್ಲ ವೆಂದು ಖಚಿತ ಪಡಿಸಿಕೊಂಡರು. ಆದರೂ ಮುಂದಿನ ಎರಡು ವಾರಗಳವರೆಗೆ ಸಾರ್ವಜನಿಕವಾಗಿ ಬೇರೆಯದಂತೆ ಹಾಗೂ ಆರೋಗ್ಯದಲ್ಲಿ ಯಾವುದೇ ವ್ಯತ್ಯಾಸ ಕಂಡು ಬಂದಲ್ಲಿ ತಕ್ಷಣ ಆರೋಗ್ಯ ಕೇಂದ್ರಕ್ಕೆ ಕರೆ ಮಾಡುವಂತೆ ಸೂಚಿಸಿದರು.

ತಾಲೂಕು ಆರೋಗ್ಯಾಧಿಕಾರಿ ಡಾ.ಬಿ.ವಿ.ಗಿರೀಶ್, ಜಿಲ್ಲಾ ಆರೋಗ್ಯ ಮೇಲ್ವಿಚಾರಕ ಎಂ.ಬಿ.ಹನುಮಂತಪ್ಪ, ಜಿಲ್ಲಾ ಪತಂಜಲಿ ಯೋಗ ಪ್ರಚಾರಕ ರವಿ ಕೆ.ಅಂಬೇಕರ್, ಆರೋಗ್ಯ ನಿರೀಕ್ಷಕ ಮಹೇಶ್, ನೇತ್ರಾಧಿಕಾರಿ ಕೆ.ಸಿ.ರಾಮು, ಬೆಳಗಟ್ಟ ಗ್ರಾಪಂ ಸದಸ್ಯ ಹನುಮಂತರೆಡ್ಡಿ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net