ಚಿತ್ರದುರ್ಗಕ್ಕೆ ಇಂದು ಸಚಿವರ ದಂಡು

KOTE (1)
Published on

ಚಿತ್ರದುರ್ಗ: ನಗರಕ್ಕೆ ಶುಕ್ರವಾರ ಸಚಿವರ ದಂಡು ಧಾಗುಂಡಿ ಇಡುತ್ತಿದೆ.

ಜೂ.12ರ ಬೆಳಗ್ಗೆ 11ಕ್ಕೆ ರೆಡ್ಡಿ ಸಮುದಾಯ ಭವನದಲ್ಲಿ ಹಮ್ಮಿಕೊಂಡಿರುವ ನರೇಗಾ ಅಂತರ್ಜಲ ಚೇತನ ಯೋಜನೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಪಾಲ್ಗೊಳ್ಳಲಿದ್ದಾರೆ.

ಮಧ್ಯಾಹ್ನ 12 ಗಂಟೆಗೆ ನಗರದ ಜಿಪಂ ಸಭಾಂಗಣದಲ್ಲಿ ಏರ್ಪಡಿಸಿರುವ ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹ ಧನ ವಿತರಣೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಸಹಕಾರ ಸಚಿವ ಎಚ್.ಟಿ.ಸೋಮ ಶೇಖರ್, ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ಭಾಗಿಯಾಗಲಿದ್ದಾರೆ.

ಪ್ರೋತ್ಸಾಹ ಧನ ವಿತರಣೆ: ಕರೊನಾ ಸೋಂಕಿನ ಸಂದರ್ಭ ಜೀವ ಭಯ ತೊರೆದು ಕೆಲಸ ಮಾಡಿರುವ ಒಂದು ನೂರು ಆಶಾ ಕಾರ್ಯಕರ್ತೆಯರಿಗೆ ಸಹಕಾರ ಸಂಸ್ಥೆಗಳಿಂದ ಶುಕ್ರವಾರ ಪ್ರೋತ್ಸಾಹ ಧನ ವಿತರಿಸಲಾಗುತ್ತಿದೆ ಎಂದು ಡಿಸಿಸಿ ಬ್ಯಾಂಕ್ ಎಂಡಿ ಎಂ.ಇಲ್ಯಾಸ್ ಉಲ್ಲಾ ಷರೀಫ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net