ಪ್ರಾಣಿಗಳ ದತ್ತು ಸ್ವೀಕಾರಕ್ಕೆ ಅವಕಾಶ

ADU MALLESWARA ZOO (8)
Published on

ಚಿತ್ರದುರ್ಗ: ನಗರದ ಆಡುಮಲ್ಲೇಶ್ವರ ಕಿರು ಮೃಗಾಲಯದಲ್ಲಿರುವ ಪ್ರಾಣಿಗಳನ್ನು ದತ್ತು ಪಡೆಯಲು ಸಾರ್ವಜನಿಕರಿಗೆ ಅವಕಾಶ ಮಾಡಿಕೊಡಲಾಗಿದೆ ಎಂದು ಡಿಎಫ್‌ಒ ಕೆ.ಚಂದ್ರಶೇಖರ ನಾಯಕ ತಿಳಿಸಿದ್ದಾರೆ.

ಹೊಸದಿಲ್ಲಿ ಕೇಂದ್ರೀಯ ಮೃಗಾಲಯ ಪ್ರಾಧಿಕಾರ ದೇಶದೆಲ್ಲ ಮೃಗಾಲಯಗಳಲ್ಲಿರುವ ಪ್ರಾಣಿ, ಪಕ್ಷಿಗಳನ್ನು ದತ್ತು ಕೊಡುವ ಕಾರ್ಯಕ್ರಮ ರೂಪಿಸಿದೆ.

ನಿರ್ದಿಷ್ಟ ಹಣ ಕೊಟ್ಟು ಪ್ರಾಣಿ, ಪಕ್ಷಿಗಳ ಆಹಾರ, ವೈದ್ಯಕೀಯ ಮತ್ತು ನಿರ್ವಹಣೆಗೆ ನೆರವಾಗಬಹುದಾಗಿದೆ. ಈ ಮೊತ್ತಕ್ಕೆ ಆದಾಯ ತೆರಿಗೆ ಕಾಯ್ದೆ 80 (ಜಿ) ಅಡಿ ತೆರಿಗೆ ವಿನಾಯಿತಿ ಇದೆ.

ಆಸಕ್ತರು ಉಪ ಅರಣ್ಯ ಸಂರಕ್ಷಣಾಧಿಕಾರಿ-9449863633, ವಲಯ ಅರಣ್ಯಾಧಿಕಾರಿ-9449005522 ಅಥವಾ 08194-230402 ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದು.

7 ಚಿರತೆ, 4 ನರಿ, 14 ಕೃಷ್ಣಮೃಗ, 5 ನೀಲ್ಗಾಯ್, 6 ಜಿಂಕೆ, 14 ಫೀಸಂಟ್ರಿಸ್, 20 ಬಡ್ಗೆರೀಸ್ ಪಕ್ಷಿಗಳು, 3 ಕಾಕ್‌ಟೈಲ್, 3 ಕರಡಿ, 4 ಎಮು ಪಕ್ಷಿ, 2 ಹೆಬ್ಬಾವು, 2 ಮೊಸಳೆ ಹಾಗೂ 10 ಆಮೆಗಳನ್ನು ದತ್ತು ಸ್ವೀಕರಿಸಬಹುದಾಗಿದೆ ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net