ಬೈಕ್ ಸವಾರನ ಸಾವು

CRIMe download
Published on

ಚಿತ್ರದುರ್ಗ: ನಗರದ ಹೊರವಲಯದ ಕುಂಚಿಗನಾಳ್ ಕಣಿವೆ ಬಳಿ ಬುಧವಾರ ರಾತ್ರಿ 10ಕ್ಕೆ ರಸ್ತೆ ವಿಭಜಕಕ್ಕೆ ಬೈಕ್ ಡಿಕ್ಕಿ ಹೊಡೆದು ಸವಾರ ಮೃತಪಟ್ಟಿದ್ದಾನೆ.

ಹಾಯ್ಕಲ್ ಗೊಲ್ಲರಹಟ್ಟಿ ರವಿಕುಮಾರ (24) ಮೃತನು. ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಈತನನ್ನು ಜಿಲ್ಲಾಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆ ಮೃತರಾಗಿದ್ದಾನೆ. ಬಡಾವಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net