ಸೂರ್ಯನ ಕಿರಣಗಳ ಪ್ರಖರತೆ ತೀವ್ರ

ctd 1 rathsaptami
Published on

ಚಿತ್ರದುರ್ಗ: ನಗರದ ಜ್ಞಾನಭಾರತಿ ವಿದ್ಯಾಮಂದಿರದಲ್ಲಿ ಶನಿವಾರ ರಥಸಪ್ತಮಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಈ ವೇಳೆ ಮಾತನಾಡಿದ ಚಿತ್ರದುರ್ಗ ಪತಂಜಲಿ ಯೋಗ ಸಮಿತಿ ಜಿಲ್ಲಾ ಕಾರ್ಯದರ್ಶಿ ಪ್ರಸನ್ನಕುಮಾರ್, ಇಂದು ಸೂರ್ಯನ ಹುಟ್ಟಿದ ದಿನ. ಇಂದಿನಿಂದ ಸೂರ್ಯನ ಕಿರಣಗಳ ಪ್ರಖರತೆ ಹೆಚ್ಚುವುದರಿಂದೊಂದಿಗೆ ಹಗಲಿನ ಸಮಯದಲ್ಲೂ ಹೆಚ್ಚಳವಾಗಲಿದೆ ಎಂದರು.

ವಸಂತ ಋತುವಿನ ಆಗಮನದಿಂದ ಪ್ರಕೃತಿಯಲ್ಲಿ ಹೊಸ ಬದಲಾವಣೆ ಕಾಣಲಾರಂಬಿಸುತ್ತದೆ. ಈ ದಿನ ಸೂರ್ಯೋದಯದ ಮೊದಲು ಒಂದು ಎಕ್ಕೆ ಎಲೆಯನ್ನು ತಲೆ ಮೇಲಿಟ್ಟು ಕೊಂಡು ಸೂರ್ಯಮಂತ್ರ ಪಠಿಸುತ್ತಾ ತಲೆ ಸ್ನಾನ ಮಾಡುವುದರಿಂದ ಸರ್ವ ಪಾಪಗಳು ಪರಿಹಾರವಾಗಿ, ಆರೋಗ್ಯ ವೃದ್ಧಿಸುತ್ತದೆ ಎಂದು ತಿಳಿಸಿದರು.

ಶಾಲೆಯ ಆಡಳಿತಾಧಿಕಾರಿ ಹನುಮೇಶ್ ಪದಕಿ, ಸಂಚಾಲಕ ರಂಗಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net