12ರಂದು ಕಣ್ಣಿನ ತಪಾಸಣೆ

KANNU AKS_7151
Published on

ಚಿತ್ರದುರ್ಗ: ನಗರದ ಶ್ರೀ ಜೈನ ಸಂಘ ಮತ್ತಿತರ ಸಂಸ್ಥೆಗಳಾಶ್ರಯದಲ್ಲಿ ಧರ್ಮಶಾಲಾ ರಸ್ತೆಯಲ್ಲಿರುವ ಶ್ರೀಪಾರ್ಶ್ವನಾಥ ವಿದ್ಯಾಸಂಸ್ಥೆಯ ಲ್ಲಿ ಜ.12ರ ಬೆಳಗ್ಗೆ 8.30ರಿಂದ ಕಣ್ಣಿನ ತಪಾಸಣೆ ಉಚಿತ ಶಿಬಿರ ಆಯೋಜಿಸಲಾಗಿದೆ.

ಅರ್ಹರಿಗೆ ಕಣ್ಣಿನ ಪೊರೆ ತಪಾಸಣೆ ಮತ್ತು ಲೇಸಿಕ್ ಪರೀಕ್ಷೆ ನಡೆಸಲಾಗುವುದು. ಬೆಂಗಳೂರು ಸೋಲಂಕಿ ಕಣ್ಣಿನ ಆಸ್ಪತ್ರೆ ವೈದ್ಯೆ ಡಾ.ಪ್ರಿಯಾಂಕ ಸೋಲಂಕಿ ತಂಡ ಶಿಬಿರದಲ್ಲಿ ಭಾಗವಹಿಸಲಿದೆ. ಮಾಹಿತಿಗೆ (08194-221799) ಸಂಪರ್ಕಿಸಿ ಹೆಸರು ನೋಂದಾಯಿಸುವಂತೆ ಪ್ರಕಟಣೆ ಕೋರಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net