ಶ್ರೀ ಕಾಟಲಿಂಗೇಶ್ವರ ಸ್ವಾಮಿ ಜಾತ್ರೆ

katalingeshwara download
Published on

ಚಿತ್ರದುರ್ಗ: ನಗರದ ದೊಡ್ಡಪೇಟೆ ಸಮೀಪದ ಕೆಂಚನಾರಹಟ್ಟಿ ಕಾಟಲಿಂಗೇಶ್ವರ ಸ್ವಾಮಿ ದೇವರ ಕಾಳು ಹಬ್ಬದ ಜಾತ್ರಾ ಮಹೋತ್ಸವ ಫೆ.24ರಿಂದ 26ರ ವರೆಗೆ ಜರುಗಲಿದೆ.

24ರಂದು ಬ್ರಾಹ್ಮಿ ಮಹೂರ್ತದಲ್ಲಿ ಶ್ರೀ ಸ್ವಾಮಿಯನ್ನು ನಗರದಿಂದ ಮೂಲಸ್ಥಾನ ದ್ಯಾಮವನಹಳ್ಳಿ ಪೌಳಿ ಸಮೀಪ ಕಾಲು ನಡಿಗೆಯಲ್ಲಿ ತೆರಳಿ ಗಂಗಾಪೂಜೆ ನೆರವೇರಿಸಲಾಗುವುದು. ಸಂಜೆ 5ಕ್ಕೆ ದೇವಾಲಯಕ್ಕೆ ತರಲಾಗುವುದು.

25ರಂದು ದೇವಾಲಯದಲ್ಲಿ ರಾತ್ರಿ 8ಕ್ಕೆ ಕರಿ ಕಂಬಳಿ ಗದ್ದಿಗೆ ಹಾಸಿ ಕಾಳು ಬೇಯಿಸಿ ರಾಶಿ ಹಾಕಿ ಭವ್ಯ ಅಲಂಕಾರ ದೊಂದಿಗೆ ಸ್ವಾಮಿಯನ್ನು ಪೂಜಿಸಲಾಗುವುದು. ಭಕ್ತರಿಗೆ ಅನ್ನ ಸಂತರ್ಪಣೆ ಇರುತ್ತದೆ. 26ರ ಬೆಳಗ್ಗೆ 9ಕ್ಕೆ ದೊಡ್ಡ ಎಡೆ, ಗದ್ದಿಗೆ ಪೂಜೆ ಬಳಿಕ ಜಾತ್ರಾ ಮಹೋತ್ಸವ ಸಂಪನ್ನಗೊಳ್ಳುತ್ತದೆ ಎಂದು ದೇವಾಲಯದ ಪ್ರಮುಖರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net