

ಚಿತ್ರದುರ್ಗ: ನಗರದ ಶ್ರೀ ಅಂಜನಾ ನೃತ್ಯ ಕಲಾ ಕೇಂದ್ರದ ಕಲಾವಿದೆ ವಿದುಷಿ ನಂದಿನಿ ಶಿವಪ್ರಕಾಶ್ ಕರ್ನಾಟಕ ನೃತ್ಯ ಕಲಾ ಪರಿಷತ್‌ನ ಪ್ರಸಕ್ತ ಸಾಲಿನ ಭರತಮುನಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಬೆಂಗಳೂರಿನ ಶುಕ್ರ ಆಡಿಟೋರಿಯಮ್‌ನಲ್ಲಿ ಜ.26 ರ ಸಂಜೆ ನಡೆಯುವ ಭರತಮುನಿ ಉತ್ಸವದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ ಎಂದು ಕಲಾ ಕೇಂದ್ರದ ಪ್ರಾಚಾರ್ಯ ಸಿ.ಆರ್.ಶಿವಪ್ರಕಾಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.