ಚಿತ್ರದುರ್ಗ: ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷರಾಗಿ ಗೊಡಬನಹಾಳ್ ಕ್ಷೇತ್ರದ ಎಂ.ಸಿ.ಸಿದ್ದಲಿಂಗಪ್ಪ, ಉಪಾಧ್ಯಕ್ಷರಾಗಿ ಭರಮಸಾಗರ ಕ್ಷೇತ್ರದ ಎಂ.ಗೀತಾ ಅವಿರೋಧವಾಗಿ ಬುಧವಾರ ಆಯ್ಕೆಯಾದರು.
ಎರಡೂ ಸ್ಥಾನಗಳಿಗೆ ತಲಾ ಒಬ್ಬೊಬ್ಬರು ನಾಮ ಪತ್ರ ಸಲ್ಲಿಸಿದ್ದರು ಎಂದು ಚುನಾವಣಾಧಿಕಾರಿ, ತಹಸೀಲ್ದಾರ್ ಜೆ.ಸಿ.ವೆಂಕಟೇಶಯ್ಯ ತಿಳಿಸಿದರು.
ಜಿ.ಸುರೇಶ್‌ಬಾಬು, ಡಿ.ಟಿ.ರಾಜೇಂದ್ರರೆಡ್ಡಿ, ತಿಮ್ಮಾರೆಡ್ಡಿ, ವಿಶ್ವನಾಥಪ್ಪ, ಎಚ್.ವಿ.ನಾಗರಾಜ್, ನಂದಿನಾಗ ರಾಜ್, ರಾಜಣ್ಣ ಮತ್ತಿತರ ಸಮಿತಿ ನಿರ್ದೇಶಕರು ಇದ್ದರು.