ಪೌರತ್ವ ಕಾಯ್ದೆ ಜಾರಿ ಬೆಂಬಲಿಸಿ ಪ್ರತಿಭಟನೆ

CTD 03 ANTY CAA PROTEST
Published on

ಚಿತ್ರದುರ್ಗ: ಅಡ್ವೋಕೇಟ್ಸ್ ಫೋರಂ ವಕೀಲರು ಪೌರತ್ವ ಕಾಯ್ದೆ ಬೆಂಬಲಿಸಿ ನಗರದಲ್ಲಿ ಸೋಮವಾರ ಮೆರವಣಿಗೆ ನಡೆಸಿದರು.
ಸಿಎಎ, ಎನ್‌ಆರ್‌ಸಿ ಕಾಯ್ದೆ ದೇಶಕ್ಕೆ ಅನುಕೂಲಕರ ವಾತಾವರಣ ಕಲ್ಪಿಸುತ್ತದೆ. ಅಕ್ರಮ ನುಸುಳುಕೋರರನ್ನು ದೇಶದಿಂದ ಹೊರ ಹಾಕಲು ಕಾಯ್ದೆ ಪರಿಣಾಮಕಾರಿ ಆಗಿದೆ ಎಂದು ಘೋಷಣೆ ಕೂಗಿದರು.
ಕೋರ್ಟ್ ಆವರಣದಿಂದ ಜಿಲ್ಲಾಧಿಕಾರಿ ಕಚೇರಿವರೆಗೂ ಮೆರವಣಿಗೆ ನಡೆಸಿದ ವಕೀಲಕರು ಕಾಯ್ದೆ ಬೆಂಬಲಿಸಿ ಜಾಗೃತಿ ಮೂಡಿಸಿದರು.
ಸಿಎಎ ರಾಷ್ಟ್ರದ ಹಿತದೃಷ್ಟಿ, ಏಕತೆ ಮತ್ತು ಸುರಕ್ಷತೆಗಾಗಿ ಜಾರಿ ತರಲಾಗುತ್ತಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರ ಭಾರತೀಯನು ಸಿಎಎ, ಎನ್‌ಆರ್‌ಸಿ, ಎನ್‌ಪಿಆರ್ ಅನ್ನು ಸರ್ವಾನುಮತದಿಂದ ಬೆಂಬಲಿಸಬೇಕು. ಬೇರೆ ದೇಶಗಳ ಅಕ್ರಮ ನುಸುಳುಕೋರರನ್ನು ಗುರುತಿಸಲು ಸಿಎಎ ಸಹಕಾರಿಯಾಗಲಿದೆ. 2019ರ ಸಿಎಎ ತಿದ್ದುಪಡಿ ಕಾಯ್ದೆ ಭಾರತೀಯ ಯಾವುದೇ ಸಮುದಾಯದ, ಯಾವುದೇ ವ್ಯಕ್ತಿಯ ಹಕ್ಕನ್ನು ಕಸಿದುಕೊಳ್ಳುವುದಿಲ್ಲ. ಈ ಕಾಯ್ದೆಯನ್ನು ಯಶಸ್ವಿಯಾಗಿ ಜಾರಿಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಮೂಲಕ ಪ್ರಧಾನ ಮಂತ್ರಿಗೆ ಮನವಿ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net