ಅಸಹಾಯಕರಿಗೆ ಸ್ಪಂದಿಸಿದ ಜಿಲ್ಲಾಡಳಿತ

CTD 15 STUDENT
Published on

ಚಿತ್ರದುರ್ಗ: ತವರಿಗೆ ತೆರಳುವ ಮಾರ್ಗಮಧ್ಯೆ, ಚಿತ್ರದುರ್ಗದಲ್ಲಿ ಅಸಹಾಯಕ ಸ್ಥಿತಿಯಲ್ಲಿದ್ದ ಚಿಕ್ಕಮಗಳೂರಿನ 13 ವಿದ್ಯಾರ್ಥಿಗಳಿಗೆ ಜಿಲ್ಲಾಡಳಿತ ನೆರವಾಗಿದೆ.

ಆರು ತಿಂಗಳ ಅವಧಿಯ ಕೃಷಿ ಕೋರ್ಸ್ ಅಧ್ಯಯನಕ್ಕೆಂದು ನಾಲ್ಕು ತಿಂಗಳ ಹಿಂದೆ ಮಹಾರಾಷ್ಟ್ರದ ಲಾತೋರ್‌ಗೆ ತೆರಳಿದ್ದ 10 ವಿದ್ಯಾರ್ಥಿನಿಯರು, ಮೂವರು ವಿದ್ಯಾರ್ಥಿಗಳು, ಲಾಕ್‌ಡೌನ್‌ನಿಂದ ಕಂಗೆಟ್ಟಿದ್ದರು.

ಹೇಗಾದರೂ ಊರಿಗೆ ಹೋಗೋಣವೆಂದು ನಿರ್ಧರಿಸಿ, ಏಪ್ರಿಲ್ 14ರಂದು ಹಿಂತಿರುಗುತ್ತಿದ್ದ ವೇಳೆ ಇವರೆಲ್ಲರನ್ನೂ ವಿಜಯಪುರದಲ್ಲಿ ಪೊಲೀಸರು ತಡೆದು, ಅಲ್ಲಿಯ ಜಿಲ್ಲಾಡಳಿತ ಸೂಚನೆಯಂತೆ 28 ದಿನಗಳ ಕಾಲ ಕ್ವಾರಂಟೈನ್‌ನಲ್ಲಿ ಇರಿಸಲಾಗಿತ್ತು.

ನಂತರ, ಚಿಕ್ಕಮಗಳೂರಿಗೆ ಪ್ರಯಾಣಿಸಲು ಸೇವಾಸಿಂಧು ಮೂಲಕ ಪಾಸ್ ಪಡೆದು ಮೇ 14ರಂದು ವಿಜಯಪುರದಿಂದ ಹೊರಟಿದ್ದರು. ಇವರು ಪ್ರಯಾಣಿಸುತ್ತಿದ್ದ ಟೆಂಪೊ ಟ್ರಾವೆಲ್ ಚಾಲಕ, ಚಿತ್ರದುರ್ಗದಲ್ಲಿ ಬೆಳಗ್ಗೆ ರಾಷ್ಟ್ರೀಯ ಹೆದ್ದಾರಿಯ ಸೇವಾ ರಸ್ತೆಯ ಹೋಟೆಲ್‌ವೊಂದರ ಬಳಿ ಹಠಾತ್ತನೇ ಇಳಿಸಿ ಹಿಂತಿರುಗಿದ್ದಾನೆ.

ಇದರಿಂದ ಕಂಗಾಲಾಗಿದ್ದ ವಿದ್ಯಾರ್ಥಿಗಳನ್ನು ಜಿಲ್ಲಾಧಿಕಾರಿ ಆರ್.ವಿನೋತ್ ಪ್ರಿಯಾ ನಿರ್ದೇಶನದಂತೆ ಪೊಲೀಸರು ಮತ್ತೊಂದು ವಾಹನದಲ್ಲಿ ಮಧ್ಯಾಹ್ನ 2.15ರ ಹೊತ್ತಿಗೆ ಚಿಕ್ಕಮಗಳೂರಿಗೆ ಕಳುಹಿಸಿಕೊಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net