ಜಿಪಂ ಸಿಇಒ ಸತ್ಯಭಾಮಾ ಕೋಲಾರ ಡಿಸಿ

CTD SATHYABAMA ceo to kolara DC (1)
Published on

ಚಿತ್ರದುರ್ಗ: ಜಿಪಂ ಸಿಇಒ ಸಿ.ಸತ್ಯಭಾಮಾ ಅವರನ್ನು ಕೋಲಾರ ಜಿಲ್ಲಾಧಿಕಾರಿಯನ್ನಾಗಿ ಸರ್ಕಾರ ವರ್ಗ ಮಾಡಿದೆ. ಅಲ್ಲಿ ಜಿಲ್ಲಾಧಿಕಾರಿಯಾಗಿದ್ದ ಜೆ.ಮಂಜುನಾಥ್ ಅವರು ತರಬೇತಿಗಾಗಿ ಮಸ್ಸೂರಿಗೆ ತೆರಳಿರುವುದರಿಂದಾಗಿ, ತೆರವಾಗಿದ್ದ ಅವರ ಸ್ಥಾನಕ್ಕೆ ಸತ್ಯಭಾಮಾ ಅವರನ್ನು ನೇಮಿಸಲಾಗಿದೆ.

ಚಿತ್ರದುರ್ಗ ಜಿಪಂ ಸಿಇಒ ಆಗಿ ಡಿಸಿ ಆರ್.ವಿನೋತ್ ಪ್ರಿಯಾ ಶನಿವಾರ ಸಂಜೆಯೇ ಪ್ರಭಾರ ವಹಿಸಿಕೊಂಡಿದ್ದಾರೆ. ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿಕೊಳ್ಳಲು ಸತ್ಯಭಾಮಾ ರಾತ್ರಿಯೇ ಕೋಲಾರಕ್ಕೆ ತೆರಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net