ನೃತ್ಯ ಕಲಾ ಕೇಂದ್ರದಲ್ಲಿ ಕಳವಿಗೆ ಪ್ರಯತ್ನ

CTD CRIME
Published on

ಚಿತ್ರದುರ್ಗ: ನಗರದ ಅಂಜನಾ ನೃತ್ಯ ಕಲಾ ಕೇಂದ್ರ ಹಾಗೂ ಅದಕ್ಕೆ ಹೊಂದಿಕೊಂಡಿರುವ ಕೇಂದ್ರದ ಸಿ.ಶಿವಪ್ರಕಾಶ್ ಮನೆಯಲ್ಲಿ ಗುರುವಾರ ರಾತ್ರಿ ಇಬ್ಬರು ದುಷ್ಕರ್ಮಿಗಳು ನಡೆಸಿದ್ದ ಕಳವು ಪ್ರಯತ್ನ ವಿಫಲವಾಗಿದೆ.

ಕಲಾ ಕೇಂದ್ರದಲ್ಲಿದ್ದ ಅಲ್ಮೆರಾಗಳ ಬೀಗ ಮುರಿದು ಅಲ್ಲಿದ್ದ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿದ್ದಾರೆ. ಮನೆ ಮಂದಿ ಎಚ್ಚರಗೊಂಡಿದ್ದರಿಂದ ಕಳ್ಳರು ಕಾಲ್ಕಿತ್ತಿದ್ದಾರೆ. ದುಷ್ಕರ್ಮಿಗಳ ಕೃತ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಸ್ಥಳ ಪರಿಶೀಲಿಸಿರುವ ಬಡಾವಣೆ ಠಾಣೆ ಪಿಎಸ್‌ಐ ಗೀತಾ, ಎಎಸ್‌ಐ ನಾರಾಯಣರೆಡ್ಡಿ ಪ್ರಕರಣ ದಾಖಲಿಸಿ, ತನಿಖೆ ಮುಂದುವರಿಸಿದ್ದಾರೆ.

ಜೆಸಿಆರ್ ಕ್ರಾಸ್: ಮನೆ ಎಂದು ತಿಳಿದು ಜೆಸಿಆರ್ ಮೂರನೇ ಕ್ರಾಸ್‌ನಲ್ಲಿರುವ ಅಬಕಾರಿ ಕಚೇರಿ ಬೀಗ ಮುರಿದು ಕಳವಿಗೆ ನಡೆಸಿದ್ದ ಪ್ರಯತ್ನವಿಫಲವಾಗಿದೆ. ಸ್ಥಳ ಪರಿಶೀಲಿಸಿರುವ ನಗರ ಠಾಣೆ ಪಿಐ ನಯೀಂ ಅಹಮದ್ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

ತಮಟಕಲ್ಲು ರಸ್ತೆಯಲ್ಲಿ ಕೆಲ ದಿನಗಳ ಹಿಂದೆ ಕಳ್ಳತನದ ಯತ್ನ ಹಾಗೂ ಬಡಾವಣೆ ಠಾಣೆ ವ್ಯಾಪ್ತಿ ಬಿ.ಎಲ್.ಗೌಡ ಲೇ ಔಟ್‌ನಲ್ಲಿ ಮನೆ ಬೀಗ ಮುರಿದು ಹಾಡ ಹಗಲೇ ಬಂಗಾರ ಒಡವೆ ಕಳ್ಳತನ ಪ್ರಕರಣ ನಡೆದಿತ್ತು. ದುಷ್ಕರ್ಮಿಗಳ ಪತ್ತೆಗೆ ಪೊಲೀಸರು ಜಾಲ ಬೀಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net