ಚಿತ್ರದುರ್ಗದ ಸೀಬಾರದಲ್ಲಿ ಇಂದಿನಿಂದ ದನಗಳ ಜಾತ್ರೆ

CTD 12 RATHOTSVA
Published on

ಚಿತ್ರದುರ್ಗ: ನಗರದ ಶ್ರೀ ಮುರುಘಾಮಠದ ಆಶ್ರಯದಲ್ಲಿ ತಾಲೂಕು ಸೀಬಾರ ಗ್ರಾಮದ ಶ್ರೀ ಮೈಲಾರಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಜಗದ್ಗುರು ಶ್ರೀ ಗುರುಪಾದ ಮುರುಘರಾಜೇಂದ್ರ ಸ್ವಾಮೀಜಿ ಹಾಗೂ ಶ್ರೀ ಮೈಲಾರಲಿಂಗೇಶ್ವರ ಸ್ವಾಮಿ ರಥೋತ್ಸವ ಶುಕ್ರವಾರ ನಡೆಯಿತು.

ಎಸ್‌ಜೆಎಂ ವಿದ್ಯಾಪೀಠದ ಕಾರ‌್ಯದರ್ಶಿ ಎ.ಜೆ.ಪರಮಶಿವಯ್ಯ, ಗುತ್ತಿನಾಡು ಪ್ರಕಾಶ್, ಕೆಇಬಿ ಷಣ್ಮುಖಪ್ಪ, ಮಹಡಿ ಶಿವಮೂರ್ತಿ, ಎಂಕೆ ಹಟ್ಟಿ ಗ್ರಾಪಂ ಅಧ್ಯಕ್ಷೆ ಗೀತಾ ಬೈಯ್ಯಣ್ಣ, ಮಾಜಿ ಅಧ್ಯಕ್ಷೆ ಸುನಂದಮ್ಮ ಮತ್ತಿತರ ಪ್ರಮುಖರು, ಗ್ರಾಮಸ್ಥರು ಭಾಗವಹಿಸಿದ್ದರು.

ಜಿ.ಪಂ.ಸ್ಥಾಯಿ ಸಮಿತಿ ಅಧ್ಯಕ್ಷ ನರಸಿಂಹರಾಜು 21 ಸಾವಿರ ರೂ.ಗಳೊಂದಿಗೆ ಹರಾಜಿನಲ್ಲಿ ಮುಕ್ತಿ ಬಾವುಟವನ್ನು ಪಡೆದರು.

ಸೀಬಾರದಲ್ಲಿ ಮಾ.13 ರಿಂದ 27 ರವರೆಗೆ ದನಗಳ ಜಾತ್ರೆ ನಡೆಯಲಿದೆ. ಹಳ್ಳಿಕಾರ್, ಅಮೃತಮಹಲ್, ಸಣ್ಣಮಲ್ಲಿಗೆ, ಗುಜುಮಾವು, ನಾಟಿ ಸೇರಿದಂತೆ ವಿವಿಧ ತಳಿಯ ರಾಸುಗಳು ಸೇರಲಿದ್ದು, ಸುತ್ತಮುತ್ತಲ ಜಿಲ್ಲೆಗಳ ರೈತರು ತಮ್ಮ ರಾಸುಗಳೊಂದಿಗೆ ಭಾಗವಹಿಸಿ ಜಾತ್ರೆಯ ಸದುಪಯೋಗ ಪಡೆಯಬೇಕೆಂದು ಶ್ರೀ ಮಠದ ಪ್ರಕಟಣೆ ಕೋರಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net