ಧರಣಿಗೂ ತಟ್ಟಿದ ಕರೊನಾ ಬಿಸಿ

CTD 18 caa anti
Published on

ಚಿತ್ರದುರ್ಗ: ಸಿಎಎ, ಎನ್‌ಆರ್‌ಸಿ, ಎನ್‌ಪಿಆರ್ ವಿರೋಧಿಸಿ ಜಿಲ್ಲಾಧಿಕಾರಿ ಕಚೇರಿ ಬಳಿ ಮುಸ್ಲಿಂ ಅಡ್ವೋಕೇಟ್ಸ್ ವೆಲ್ಫೇರ್ ಟ್ರಸ್ಟ್ ಕಳೆದ 45 ದಿನಗಳಿಂದ ನಡೆಸುತ್ತಿದ್ದ ಧರಣಿ ಸತ್ಯಾಗ್ರಹವನ್ನು ಬುಧವಾರ ಸ್ಥಗಿತಗೊಳಿಸಿದೆ.

ಕರೊನಾ ಸೋಂಕು ಹರಡುವ ಭೀತಿ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ತೆಗೆದುಕೊಂಡಿರುವ ಸೋಂಕು ನಿಯಂತ್ರಣ ಕ್ರಮಗಳ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಧರಣಿ ಸ್ಥಗಿತಗೊಳಿಸಲಾಗಿದೆ.

ಪೌರತ್ವ ಕಾಯ್ದೆ ವಿರೋಧಿಸಿ ಚಿತ್ರದುರ್ಗ ಡಿಸಿ ಕಚೇರಿ ಬಳಿ ಹಮ್ಮಿಕೊಂಡಿದ್ದ ಧರಣಿಯನ್ನು ಜಿಲ್ಲಾ ಮುಸ್ಲಿಂ ವಕೀಲರ ವೆಲ್ಪೇರ್ ಟ್ರಸ್ಟ್ ಬುಧವಾರ ಸಂಜೆ ಹಿಂಪಡೆದು ಎಡಿಡಿ ಸಿ.ಸಂಗಪ್ಪ ಅವರಿಗೆ ಮನವಿ ಸಲ್ಲಿಸಿತು. ಟ್ರಸ್ಟ್ ಅಧ್ಯಕ್ಷ ಎಚ್.ಎಂ.ನೇಮತ್ ವುಲ್ಲಾ, ಪ್ರಮುಖರಾದ ಸಿ.ಮಹಮ್ಮದ್ ಸಮೀವುಲ್ಲಾ, ಎಸ್.ಸೈಯದ್ ಸ್ವಾಲೆಹಾ, ಮಹಮ್ಮದ್ ಸಾಧಿಕ್‌ವುಲ್ಲಾ, ಎಸ್.ನೂರುಲ್ ಹಸನ್ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net