13,60,688 ಮತದಾರರು

DC VINOD PRIYA.1
Published on

ಚಿತ್ರದುರ್ಗ: ಸಂಕ್ಷಿಪ್ತ ಪರಿಷ್ಕರಣೆ ಬಳಿಕ ಫೆ.7ರಂದು ಪ್ರಕಟಿಸಿರುವ ಮತದಾರರ ಅಂತಿಮ ಪಟ್ಟಿಯಂತೆ ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ 13,60,688 ಮತದಾರರು ಇದ್ದಾರೆ ಎಂದು ಡಿಸಿ ಆರ್.ವಿನೋತ್ ಪ್ರಿಯಾ ಹೇಳಿದರು.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲೆಯ 1648 ಮತಗಟ್ಟೆಗಳ ವ್ಯಾಪ್ತಿಯಲ್ಲಿ 683572 ಪುರುಷ, 677029 ಮಹಿಳಾ ಮತದಾರರು ಹಾಗೂ 87 ಇತರೆ ವರ್ಗದ ಮತದಾರರಿದ್ದಾರೆ. ಯುವ ಮತದಾರರು 29,208 ಹಾಗೂ 395 ಸೇವಾ ಹಾಗೂ ಕರ್ನಾಟಕ ಆಗ್ನೇಯ ಪದವೀಧರರ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ 20,265 ಮತದಾರರು ಇದ್ದಾರೆ ಎಂದರು.

ನಬಾರ್ಡ್ ಎಜಿಎಂ ಕವಿತಾ, ಲೀಡ್ ಬ್ಯಾಂಕ್ ಮ್ಯಾನೇಜರ್ ನಿಂಗೇಗೌಡ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಸದಾಶಿವಪ್ಪ, ಬ್ಯಾಂಕ್ ಆಫ್ ಬರೋಡ ಮ್ಯಾನೇಜರ್ ಬಿ.ಪೌಲ್ ವಿಲ್ಸನ್ ಇತರರಿದ್ದರು.

ಹೊಳಲ್ಕೆರೆ-297-115922-112927-4-228853-1963

ಹೊಸದುರ್ಗ-240-96715-93434- 0-190149-2311

ಹಿರಿಯೂರು-285-117957-118913-37-236907-4266

ಚಿತ್ರದುರ್ಗ-283-126624-128300-35-254959-6078

ಚಳ್ಳಕೆರೆ-259-106479-106395-4-212878-4224

ಕ್ಷೇತ್ರ-ಮತಗಟ್ಟೆ-ಪುರುಷ-ಮಹಿಳೆ-ಇತರೆ-ಒಟ್ಟು-ಪದವೀಧರರ ಕ್ಷೇತ್ರ ಮತದಾರರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net