ಹಲ್ಲೆಕೋರರ ಬಂಧನಕ್ಕೆ ಒತ್ತಾಯ

CTD 14 strike
Published on

ಚಿತ್ರದುರ್ಗ: ಕೊಪ್ಪಳ ಜಿಲ್ಲೆ ಗುಡದಹಳ್ಳಿಯಲ್ಲಿ ಕಾಮನಹಬ್ಬ ಆಚರಣೆ ವೇಳೆ ಕೆಲ ಸರ್ವರ್ಣೀಯರು ದಲಿತ ಬಾಲಕನ ಮೇಲೆ ಹಲ್ಲೆ ಮಾಡಿದ್ದಾರೆಂದು ಆರೋಪಿಸಿ ಅಂಬೇಡ್ಕರ್ ಸ್ವಾಭಿಮಾನಿ ಸೇನೆ ಕಾರ್ಯಕರ್ತರು ಚಿತ್ರದುರ್ಗದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.

ದಲಿತ ಕಾಲನಿ ಮನೆಗಳ ಮೇಲೆ ದಾಳಿ ನಡೆಸಿ ಅಂಬೇಡ್ಕರ್ ಭಾವಚಿತ್ರ ಧ್ವಂಸ ಮಾಡಿದ್ದು ತಪ್ಪಿತಸ್ಥರ ವಿರುದ್ಧ ಕೂಡಲೇ ಕ್ರಮ ಜರುಗಿಸಲು ಆಗ್ರಹಿಸಿ ಪ್ರತಿಭಟನಾಕಾರರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಸಮಿತಿ ಜಿಲ್ಲಾಧ್ಯಕ್ಷ ಕೆ.ರಾಮಚಂದ್ರಪ್ಪ, ಗೌರವಾಧ್ಯಕ್ಷ ಪಿ.ಎಂ.ತಿಪ್ಪೇಸ್ವಾಮಿ, ಕಾರ್ಯಾಧ್ಯಕ್ಷ ಚಂದ್ರಪ್ಪ ಘಾಟ್, ಮುಖಂಡರಾದ ಕರಿಯಪ್ಪ, ಜಿ.ಆರ್.ಪ್ರಭಾಕರ್, ಎ.ಶಿವಕುಮಾರ್, ಎಂ.ಮುಬಾರಕ್, ಎಸ್.ಮೊಹಮ್ಮದ್ ಮೊಹಸಿನ್, ದಾದಾಪೀರ್,ದುರ್ಗೇಶ್, ಇಮ್ರಾನ್, ನರಸಿಂಹಸ್ವಾಮಿ, ಆರ್.ರಾಘವೇಂದ್ರ, ಜಾಕೀರ್, ಸಾಧಿಕ್, ಸಾಬ್ಜಾನ್, ಮುಜಾಹಿದ್, ಮನ್ಸೂರ್‌ಬಾಷಾ, ಫರಹಾನ್ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net