ರಸ್ತೆ ಅಪಘಾತ; 7ಮಂದಿಗೆ ಗಾಯ

CTD ACCIDENT 16 (1)
Published on

ಚಿತ್ರದುರ್ಗ: ಭರಮಸಾಗರ ಸಮೀಪದ ಇಸಾಮುದ್ರ ಹೊಸಹಟ್ಟಿ ಬಳಿ ಸೋಮವಾರ ಟ್ರಾೃಕ್ಟರ್ ಮತ್ತು ಕಾರು ಡಿಕ್ಕಿಯಾಗಿ ಕಾರಿನಲ್ಲಿದ್ದ 7 ಮಂದಿ ಗಾಯಗೊಂಡಿದ್ದಾರೆ.

ಗಾಯಾಳುಗಳು ರಾಯಚೂರು ಜಿಲ್ಲೆ ಲಿಂಗಸೂರು ಹಟ್ಟಿ ಗೋಲ್ಡ್ ಮೈನ್ಸ್ ನಿವಾಸಿಗಳಾಗಿದ್ದು, ಕಾರಿನಲ್ಲಿ ಕುಟುಂಬ ಸಮೇತ ಕುಕ್ಕೆ ಸುಬ್ರಹ್ಮಣ್ಯಕ್ಕೆ ಪ್ರವಾಸ ಹೋಗುತ್ತಿದ್ದರೆಂದು ತಿಳಿದು ಬಂದಿದೆ. ಇವರನ್ನು ದಾವಣಗೆರೆ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ದೇವೇಂದ್ರರಾವ್, ಪ್ರಭಂಜನ್, ಕಮಲಬಾಯಿ, ಲಕ್ಷ್ಮೀಬಾಯಿ ಗಂಭೀರವಾಗಿ ಗಾಯಗೊಂಡಿದ್ದು, ವಿಜಯವಾಣಿ ಪತ್ರಕರ್ತ ಬಲಭೀಮರಾವ್, ಭೀಮಸೇನ್ ರಾವ್ ಇವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಘಟನೆ ವಿವರ: ಮಣ್ಣು ತುಂಬಿದ್ದ ಟ್ರಾೃಕ್ಟರ್ ಇಸಾಮುದ್ರ ಹೊಸಹಟ್ಟಿ ಮುಖ್ಯರಸ್ತೆ ಬಳಿ ತಿರುವು ಪಡೆಯುತ್ತಿದ್ದಾಗ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಭರಮಸಾಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net