ಶಾಸಕರಿಂದ ರೇಷನ್‌ಕಿಟ್ ಹಂಚಿಕೆ ವಿರೋಧಿಸಿ ಪ್ರತಿಭಟನೆ

CTD 26 KARMIKA
Published on

ಚಿತ್ರದುರ್ಗ: ಫಲಾನುಭವಿ ಕಾರ್ಮಿಕರಿಗೆ ಶಾಸಕರಿಂದ ರೇಷನ್ ಕಿಟ್ ಹಂಚಿಸುವ ಕಟ್ಟಡ ಕಾರ್ಮಿಕ ಕಲ್ಯಾಣ ಮಂಡಳಿ ನಿರ್ಧಾರ ವಿರೋಧಿಸಿ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್ ಜಿಲ್ಲಾ ಸಮಿತಿ ಸದಸ್ಯರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟಿಸಿದರು.

ಈ ವೇಳೆ ಮಾತನಾಡಿದ ಸಿಐಟಿಯು ಜಿಲ್ಲಾ ಸಹ ಸಂಚಾಲಕ ಸಿ.ಕೆ.ಗೌಸ್‌ಪೀರ್, ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿ ಕೊಡುವ ರೇಷನ್‌ಕಿಟ್‌ಗಳನ್ನು ಕಾರ್ಮಿಕ ಸಂಘಟನೆಗಳ ಜತೆ ಸೇರಿ ಹಂಚುವಂತೆ ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಬಿ.ಸಿ.ನಾಗರಾಜಾಚಾರಿ, ಶೇಖ್ ಕಲೀಂವುಲ್ಲಾ, ಬಿ.ಸಿ.ಭಾಸ್ಕರಾಚಾರಿ, ಎಂ.ಡಿ.ಜಿಕ್ರಿಯಾ ವುಲ್ಲಾ, ಕೃಷ್ಣ, ಎಂ.ಡಿ.ಸಮೀವುಲ್ಲಾ, ಸಣ್ಣಮ್ಮ, ಅಬ್ದುಲ್, ರಾಜಣ್ಣ, ಸಣ್ಣ ಈರಪ್ಪ, ಲಕ್ಕಪ್ಪ, ದಾದಾಪೀರ್, ಕುಮಾರ್ ಪ್ರತಿಭಟನೆಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net