ಖಾಸಗಿ ಕಂಪನಿಯಲ್ಲಿ ಮೀಸಲಾತಿ ಕೊಡಿ

CLK REDDYHALLI 07
Published on

ಚಿತ್ರದುರ್ಗ: ಐಟಿಬಿಟಿ ಸಹಿತ ಖಾಸಗಿ ಕಂಪೆನಿಗಳಲ್ಲಿ ಕನ್ನಡಿಗರಿಗೆ ಶೇ.80 ಉದ್ಯೋಗ ಮೀಸಲಿಗೆ ಒತ್ತಾಯಿಸಿ ರಾಮಭಕ್ತ ಮಂಜುನಾಥ್ ನೇತೃತ್ವದಲ್ಲಿ ಬೆಂಗಳೂರಿನ ಹೂಡಿಯಿಂದ ಬೆಳಗಾವಿ ಸುವರ್ಣಸೌಧದ ವರೆಗೆ ಹೊರಟಿರುವ ಪಾದಯಾತ್ರೆ ಶುಕ್ರವಾರ ಚಿತ್ರದುರ್ಗಕ್ಕೆ ಆಗಮಿಸಿತು.

ದೊಡ್ಡ, ದೊಡ್ಡ ಉದ್ಯೋಗಗಳು ಕನ್ನಡಿಗರಿಗೆ ದೊರಕಬೇಕು.

ಈ ವೇಳೆ ಮಾತನಾಡಿದ ಮಂಜುನಾಥ್,ಪರಭಾಷಿಕರ ಹಾವಳಿಯಿಂದಾಗಿ ಕರ್ನಾಟಕದಲ್ಲಿ ಕನ್ನಡಿಗರು ಪರಕೀಯರಂತಾಗಿದ್ದಾರೆ.

ಅದಕ್ಕಾಗಿ ಡಾ.ಸರೋಜಿನಿ ಮಹಿಷಿ ವರದಿಯನ್ನು ಶೀಘ್ರ ಅನುಷ್ಠಾನಕ್ಕೆ ಒತ್ತಾಯಿಸಿ ಹೊರಟಿರುವ ಈ ಪಾದಯಾತ್ರೆ ಶನಿವಾರ ಬೆಳಗಾವಿಗೆ ತಲುಪಲಿದೆ. ನಮ್ಮ ಹೋರಾಟಕ್ಕೆ ಬೆಂಬಲಿಸುವವರು ಮೊಬೈಲ್ 9319464683 ಸಂಖ್ಯೆಗೆ ಮಿಸ್ ಕಾಲ್ ಕೊಡುವಂತೆ ಮನವಿ ಮಾಡಿದರು.

ಕರ್ನಾಟಕ ನವನಿರ್ಮಾಣ ಸೇನೆ ಅಧ್ಯಕ್ಷ ಕೆ.ಟಿ.ಶಿವಕುಮಾರ್,ಕರವೇ ಗಜಸೇನೆಯ ದಿಲೀಪ್ ಕುಮಾರ್,ಮುನಿಕೃಷ್ಣ, ದಿನೇಶ್,ಆಂಜಿ ಮತ್ತಿತರರು ಯಾತ್ರೆಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net