ಕರಿಬಸವೇಶ್ವರ ಜಾತ್ರಾ ಮಹೋತ್ಸವ

CTD 24 KARIBASAVA
Published on

ಚಿತ್ರದುರ್ಗ: ಜೋಗಿಮಟ್ಟಿ ರಸ್ತೆ ಶ್ರೀ ಗುರು ಕರಿಬಸವೇಶ್ವರಸ್ವಾಮಿ ರಥೋತ್ಸವ ಸೋಮವಾರ ಶ್ರದ್ಧಾ ಭಕ್ತಿಯಿಂದ ನೆರವೇರಿತು.

ರಥೋತ್ಸವ ಅಂಗವಾಗಿ ನಂದಿ ಧ್ವಜಾರೋಹಣ, ರುದ್ರಾಭಿಷೇಕ, ಮಹಾಮಂಗಳಾರತಿ ನಡೆಯಿತು. ಮುಂಜಾನೆ 4.30ಕ್ಕೆ ಗಂಗಾಪೂಜೆ, ಹೋಮ ಇತರೆ ಪೂಜಾ ಕಾರ್ಯಗಳು ನಡೆದವು.

ಶ್ರೀ ಕರಿಬಸವೇಶ್ವರಸ್ವಾಮಿ, ಶ್ರೀ ಗಾಯತ್ರಿದೇವಿಯ ಪಲ್ಲಕ್ಕಿ ಉತ್ಸವ ಹಾಗೂ ರಥೋತ್ಸವದ ವೇಳೆ ಭಕ್ತರು ಬಾಳೆಹಣ್ಣುಗಳನ್ನು ರಥದ ಮೇಲೆ ಎಸೆದು ಭಕ್ತಿ ಸಮರ್ಪಿಸಿದರು.

ಪ್ರಮುಖರಾದ ಎನ್.ಓಂಕಾರ್, ಎನ್.ನಿರಂಜನಮೂರ್ತಿ, ಎಲ್.ಮೋಹನ್, ಜೆ.ಮಹೇಶ್, ನಿವೃತ್ತ ಮುಖ್ಯಶಿಕ್ಷಕ ಕೃಷ್ಣಮೂರ್ತಿ, ಪೈಲ್ವಾನ್ ರಾಮಣ್ಣ, ಮಂಜುನಾಥ್, ಸಿದ್ದೇಶ್ ಸೇರಿ ಜೋಗಿಮಟ್ಟಿ ರಸ್ತೆ ಪ್ರಮುಖರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net